

ನೆಲ್ಯಾಡಿ: ನೆಲ್ಯಾಡಿಯ ಪಿಎಂಶ್ರೀ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ಮುಂಭಾಗದಲ್ಲಿರುವ ಅವನಿ ಆರ್ಕೇಡ್‌ನ ಮೊದಲ ಮಹಡಿಯಲ್ಲಿ ಅಲಂಗಡೆ ದಂತ ಚಿಕಿತ್ಸಾಲಯ – ರೂಟ್ ಕೆನಾಲ್ ಮತ್ತು ಇಂಪ್ಲಾಂಟ್ ಸೆಂಟರ್ ಎಂಬ ಹೆಸರಿನಲ್ಲಿ ನೂತನ ದಂತ ಚಿಕಿತ್ಸಾ ಕೇಂದ್ರ ಎ.9ರಂದು ಬೆಳಿಗ್ಗೆ 8.30ಕ್ಕೆ ಶುಭಾರಂಭಗೊಳ್ಳುತ್ತಿದೆ.
ದಂತ ಚಿಕಿತ್ಸೆಯ ವಿವಿಧ ತಂತ್ರಜ್ಞಾನದೊಂದಿಗೆ ಈ ಕ್ಲಿನಿಕ್‌ನ್ನು ಆರಂಭಿಸಲಾಗುತ್ತಿದ್ದು, ರೋಗಿಗಳಿಗೆ ಸಮಗ್ರ ಸೇವೆ ನೀಡುವ ಉದ್ದೇಶವಿದೆ. ಇಲ್ಲಿ ಹಲ್ಲಿನ ತಪಾಸಣೆ, ನೋವಿಲ್ಲದ ಹಲ್ಲು ಕೀಳುವುದು, ವಕ್ರದಂತ (ಕ್ಲಿಪ್) ಚಿಕಿತ್ಸೆ, ಹಲ್ಲು ಸ್ವಚ್ಛತೆ ಮತ್ತು ಪಾಲಿಶ್, ರೂಟ್ ಕೆನಾಲ್ ಚಿಕಿತ್ಸೆ, ಕೃತಕ ದಂತ ಜೋಡಣೆ, ಡೆಂಟಲ್ ಇಂಪ್ಲಾಂಟ್, ಎಕ್ಸ್ರೇ, ಹಲ್ಲಿನ ಬಣ್ಣದ ಫಿಲ್ಲಿಂಗ್ ಹಾಗೂ ಸಂದು ಹಲ್ಲು ಫಿಲ್ಲಿಂಗ್ ಸೇರಿದಂತೆ ಹಲವು ಆಧುನಿಕ ಚಿಕಿತ್ಸಾ ಸೌಲಭ್ಯಗಳಿವೆ. ಎಂದು ಕ್ಲಿನಿಕ್‌ನ ವೈದ್ಯರಾದ ಡಾ. ಈಶ ಕೃಷ್ಣ ಭಟ್ ಅವರು ತಿಳಿಸಿದ್ದಾರೆ.
ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8197741311 ಅನ್ನು ಸಂಪರ್ಕಿಸಬಹುದು.










