

ನೆಲ್ಯಾಡಿ: ಜೆಸಿಐ ನೆಲ್ಯಾಡಿಯ ಆಶ್ರಯದಲ್ಲಿ, ಲಹರಿ ಸಂಗೀತ ಕಲಾ ಕೇಂದ್ರ ನೆಲ್ಯಾಡಿ ಮತ್ತು ವರ್ತಕ ಹಾಗೂ ಕೈಗಾರಿಕಾ ಸಂಘ ನೆಲ್ಯಾಡಿ – ಕೌಕ್ರಾಡಿಯ ಸಹಯೋಗದೊಂದಿಗೆ ಏರ್ಪಡಿಸಲಾದ 7 ದಿನಗಳ “ಮಕ್ಕಳ ಮೋಜಿನ ಬೇಸಿಗೆ ಶಿಬಿರ”ದ ಉದ್ಘಾಟನೆ ಗುರುವಾರ ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಜರುಗಿತು.


ಶಿಬಿರವನ್ನು ಸಂತ ಜಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ಆರ್.ವೆಂಕಟರಮಣ ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಮಾತನಾಡಿ “ರಜಾ ವೇಳೆಯಲ್ಲಿ ಮೊಬೈಲ್, ಟಿವಿ ಗೀಳುಗಳಿಂದ ಮಕ್ಕಳನ್ನು ದೂರವಿಟ್ಟು ಇಂಥ ಶಿಬಿರಗಳು ಹೊಸ ಕೌಶಲ್ಯಗಳನ್ನು ಕಲಿಯಲು, ಬೇರೆ ಬೇರೆ ಮಕ್ಕಳೊಡನೆ ಸ್ನೇಹ ಬೆಳೆಸಲು, ಸಂಪನ್ಮೂಲ ವ್ಯಕ್ತಿಗಳಿಂದ ಪಾಠ ಪಡೆಯಲು ಉತ್ತಮ ವೇದಿಕೆಯಾಗಿವೆ” ಎಂದು ಹೇಳಿದರು. ಅವರು ಪೋಷಕರಿಗೆ ಮಕ್ಕಳನ್ನು ಇಂಥ ಶಿಬಿರಗಳಲ್ಲಿ ಭಾಗವಹಿಸಲು ಪ್ರೇರೇಪಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ವಹಿಸಿ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ಜೆಸಿಐ ವಲಯ 15ರ ಉದಕ ಪತ್ರಿಕೆ ಸಂಪಾದಕರಾದ ಜೆಸಿ ಮೋಹನ್ ಚಂದ್ರ, ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ಲಹರಿ ಸಂಗೀತ ಕಲಾ ಕೇಂದ್ರದ ಗುರು ವಿಶ್ವನಾಥ ಶೆಟ್ಟಿ.ಕೆ, ಮಹಿಳಾ ಜೆಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ್, ಕಾರ್ಯದರ್ಶಿ ಕೆ.ಸಿ.ನವ್ಯ ಪ್ರಸಾದ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜೆಸಿಐ ಪೂರ್ವಾಧ್ಯಕ್ಷ ಪುರಂದರ ಗೌಡ, ಸಂಪನ್ಮೂಲ ವ್ಯಕ್ತಿಗಳು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಸಿ.ನವ್ಯ ಪ್ರಸಾದ್ ವಂದಿಸಿದರು.










