ಉಜಿರೆ ಎಸ್‌ಡಿಎಂ ಪ.ಪೂ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಪೂರ್ಣಾಂಕ

ಶೇರ್ ಮಾಡಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರುಬಾ ಫಾತಿಮಾ ಸಂಸ್ಕೃತದಲ್ಲಿ 100 ಅಂಕ ಪಡೆದು ಸಂಸ್ಕೃತ ಭಾಷಾ ವಿಭಾಗಕ್ಕೆ ಹೆಮ್ಮೆ ತಂದಿದ್ದಾಳೆ.

ಒಟ್ಟಾರೆ ಈಕೆ 558 ಅಂಕಗಳೊಂದಿಗೆ ವಿಜ್ಞಾನ ವಿಷಯಗಳಲ್ಲಿಯೂ ವಿಶೇಷ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಇವಳು ಉಜಿರೆಯ ಅಬ್ದುಲ್ ಲತೀಫ್ ಹಾಗೂ ಸಂಶದ್ ದಂಪತಿಯ ಪುತ್ರಿ. ಈಕೆ ಪ್ರಥಮ ಬಾರಿಗೆ ಪಿಯುಸಿ ವಿದ್ಯಾಭ್ಯಾಸದಲ್ಲಿ ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಂಡು ಪೂರ್ಣಾಂಕ ಪಡೆದಿರುವುದು ಮತ್ತೊಂದು ವಿಶೇಷವಾಗಿದೆ. ಪ್ರಾಚಾರ್ಯ ಪ್ರಮೋದ್ ಕುಮಾರ್ ಇವಳನ್ನು ಅಭಿನಂದಿಸಿದ್ದಾರೆ.

Nellyady
  •  

Leave a Reply

error: Content is protected !!