

ನೆಲ್ಯಾಡಿ: ಪಾಸ್ಕ ಹಬ್ಬದ ಪೂರ್ವಸಿದ್ಧತೆಗಳ ಭಾಗವಾಗಿ ಕ್ರೈಸ್ತ ಸಮುದಾಯವು ವಿಶ್ವದಾದ್ಯಾಂತ ಭಕ್ತಿ, ಭಾವನೆ ಮತ್ತು ಆಚರಣೆಗಳಿಂದ ಗರಿಗಳ ಭಾನುವಾರವನ್ನು ಬಹುಶ್ರದ್ಧೆಯಿಂದ ಆಚರಿಸುತ್ತಿದೆ. ಈ ವಿಶೇಷ ದಿನ, ಶುಭ ಶುಕ್ರವಾರದ ಪೂರ್ವಭಾವಿಯಾಗಿ, ಜರುಸಲೆಮ್ ಪಟ್ಟಣ ಪ್ರವೇಶಿಸಿದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ನಡೆದ ವಿಶೇಷ ಆರಾಧನೆಗೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪ್ರೊಕ್ಯೂರೇಟರ್ ವಂದನಿಯ ಫಾ.ಅಬ್ರಹಾಂ ಪಟ್ಟೇರಿ ನೇತೃತ್ವ ನೀಡಿದರು. ಈ ಸಂದರ್ಭದಲ್ಲಿ ತೆಂಗಿನ ಗರಿಗಳಿಂದ ಅಲಂಕರಿಸಿದ ಚರ್ಚ್ ಆವರಣದಲ್ಲಿ ಪೂಜೆ ನಡೆಯಿದ್ದು, ಅದ್ದೂರಿಯಾಗಿ ಗರಿಗಳ ಮೆರವಣಿಗೆ ಕೂಡ ಜರಗಿತು.
ಚರ್ಚ್‌ನ ಧರ್ಮಗುರು ವಂ.ಫಾ.ಶಾಜಿ ಮಾತ್ಯು ಹಾಗೂ ಕೊಕ್ಕಡ ಎಸ್‌ಎಫ್‌ಎಸ್ ಶಾಲೆಯ ವಂ.ಫಾ.ಅರುಣ್ ಪೂಜಾವಿದಿಗಳೂ ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು, ಕ್ರೈಸ್ತ ಸಮುದಾಯಕ್ಕೆ ಶ್ರದ್ಧೆ, ಶಾಂತಿ ಮತ್ತು ಆತ್ಮೀಯತೆಯ ಸಂದೇಶ ನೀಡಿದರು.
ಈ ಪೂಜಾ ಸಮಾರಂಭದಲ್ಲಿ ಶೇಕಡಾರು ಭಕ್ತರು ಭಾಗವಹಿಸಿ ಗರಿಗಳ ಭಾನುವಾರದ ಮಹತ್ವವನ್ನು ಭಾವಪೂರ್ಣವಾಗಿ ಅನುಭವಿಸಿದರು. ಪಾಸ್ಕ ಹಬ್ಬದ ಆರಂಭವನ್ನೂ ಸೂಚಿಸುವ ಈ ದಿನ, ಶ್ರದ್ಧಾ, ಪ್ರಾರ್ಥನೆ ಹಾಗೂ ಶಾಂತಿಯ ಸಂಕೇತವಾಗಿ ವಿಶಿಷ್ಟ ರೀತಿ ಆಚರಿಸಲಾಯಿತು.









