ಕೊಕ್ಕಡ – ಕೌಕ್ರಾಡಿಯ ಸಂತ ಜೋನರ ದೇವಾಲಯದಲ್ಲಿ ಭಕ್ತಿಪೂರ್ಣ ಗರಿಗಳ ಭಾನುವಾರದ ಆಚರಣೆ

ಶೇರ್ ಮಾಡಿ

ಕೊಕ್ಕಡ: ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಇಂದು ಭಕ್ತಿಭಾವದಿಂದ ಗರಿಗಳ ಭಾನುವಾರ ಆಚರಿಸಲಾಯಿತು. ಕ್ರೈಸ್ತ ಸಮುದಾಯದ ಪವಿತ್ರ ಪಾಸ್ಕ ಹಬ್ಬದ ಪೂರ್ವಸಿದ್ಧತೆಯ ಭಾಗವಾಗಿ ಆಚರಿಸಲಾಗುವ ಈ ವಿಶೇಷ ದಿನವನ್ನು ಸ್ಮರಣೀಯವಾಗಿ ರೂಪಿಸಲಾಗಿತ್ತು.

ಈ ಪವಿತ್ರ ಸಂದರ್ಭದಲ್ಲಿನ ಪ್ರಾರ್ಥನಾ ವಿಧಿ ಹಾಗೂ ಬಲಿಪೂಜೆಯನ್ನು ಪ್ರಧಾನ ಗುರುಗಳಾದ ವಂ.ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ ರವರು ಅರ್ಪಿಸಿದರೆ, ಸೇವಾದರ್ಶಿಯಾಗಿ ಮರ್ವಿನ್ ಪ್ರವೀಣ್ ಲೋಬೊ ಅವರು ಸಹಭಾಗಿಯಾಗಿ ದೇವಸನ್ನಿದಿಯಲ್ಲಿ ಸೇವೆ ಸಲ್ಲಿಸಿದರು.

ಸಭೆಯಲ್ಲಿ ಭಕ್ತಾದಿಗಳು ತೆಂಗಿನ ಗರಿಗಳನ್ನು ಕೈಯಲ್ಲಿ ಹಿಡಿದು, ಸ್ತುತಿಗೀತೆಗಳನ್ನು ಹಾಡುತ್ತಾ ಶ್ರದ್ಧಾ, ಶಾಂತಿ ಮತ್ತು ಸಮರ್ಪಣೆಯ ಭಾವದಲ್ಲಿ ಚರ್ಚ್ ಆವರಣದ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಸಂದರ್ಭ ಚರ್ಚ್‌ನ ಪರಿಪಾಲನಾ ಸಮಿತಿಯ ಉಪಾಧ್ಯಕ್ಷರಾದ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, ಆರು ವಾಳ್ಯದ ಗುರಿಕಾರರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಮಾರಂಭದ ಯಶಸ್ಸಿಗೆ ಶ್ರಮಿಸಿದರು.

ಭಕ್ತರ ಭಾವಪೂರ್ಣ ಉಪಸ್ಥಿತಿ, ದೇವಾಲಯದ ಸೌಂದರ್ಯಮಯ ಅಲಂಕಾರ ಮತ್ತು ಭಕ್ತಿಯ ಮೆರವಣಿಗೆ ಗರಿಗಳ ಭಾನುವಾರದ ಆಚರಣೆಗೆ ವಿಶೇಷ ಹಿರಿಮೆ ನೀಡಿದವು. ಈ ಆಚರಣೆ, ಪಾಸ್ಕ ಕಾಲದ ಆತ್ಮಸ್ಫೂರ್ತಿಗೆ ದಾರಿ ಮಾಡಿಕೊಡುವಂತಹ ಭಕ್ತಿಪೂರ್ಣ ಅನುಭವವಾಯಿತು.

Nellyady
  •  

Leave a Reply

error: Content is protected !!