ಮಹಿಳಾ ದಿನಾಚರಣೆಯ ಶುಭಾಶಯಗಳು

ಶೇರ್ ಮಾಡಿ

ನೇಸರ ಮಾ.08:ಮಾರ್ಚ್‌ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಬಾಳಿನಲ್ಲೂ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಗೌರವಿಸಲು, ಅವರ ಶ್ರಮಕ್ಕೆ ಧನ್ಯವಾದ ಹೇಳಲು ಇದೊಂದು ಸದಾವಕಾಶವಾಗಿದೆ.ಮಹಿಳಾ ದಿನಾಚರಣೆಯ ಮುಖ್ಯ ಉದ್ದೇಶವೆಂದರೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳು ಮತ್ತು ಅವರು ಕಲಾವಿದರು, ಶಿಕ್ಷಕರು, ಆಡಳಿತಾಧಿಕಾರಿಗಳು, ರಾಜಕಾರಣಿಗಳು ಅಥವಾ ವಿಜ್ಞಾನಿಗಳು ನಿರ್ವಹಿಸುವ ಪಾತ್ರಗಳನ್ನು ಆಚರಿಸುವುದು.

ಮಹಿಳೆಯರನ್ನು ಎಲ್ಲಾ ಸ್ತರಗಳಲ್ಲೂ ಮೇಲಕ್ಕೆತ್ತಬೇಕು, ಆಕೆಗೆ ಪುರುಷರಷ್ಟೇ ಸಮಾನ ಅವಕಾಶಗಳನ್ನು ನೀಡಬೇಕು, ಆಕೆಯ ಸಾಧನೆಗಳನ್ನು ಗುರುತಿಸಬೇಕು ಎಂಬ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುವುದು. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ. ಒಬ್ಬ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಮನೆಗೆ ಆಳಾಗಿ, ಹೊರಗಡೆ ದುಡಿಯುವ ಮಹಿಳೆಯಾಗಿ ಹೀಗೆ ಮಹಿಳೆ ಹತ್ತು ಹಲವು ಮಾತ್ರಗಳನ್ನು ಒಟ್ಟಿಗೆ ಮಾಡುತ್ತಾಳೆ. ಆಕೆಯ ಸಾಮಾರ್ಥ್ಯಕ್ಕೆ ಅಕೆನೇ ಸರಿಸಾಟಿ. ನಿಮ್ಮ ಬದುಕಿನಲ್ಲಿ ಆಕೆಯ ಮಾತ್ರ ಮಹತ್ವವಾಗಿರುತ್ತದೆ. ಆಕೆ ಗೃಹಿಣಿಯಾಗಿರಬಹುದು ಅಥವಾ ಹೊರಗಡೆ ದುಡಿಯುವ ಮಹಿಳೆಯಾಗಿರಬಹುದು, ಇಬ್ಬರಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ. ಇಬ್ಬರ ಪಾತ್ರಗಳು ನಿಮ್ಮ ಸಂಸಾರ ತೂಗಿಸಲು ಬಹುಮುಖ್ಯ. ಆಕೆ ನಿಮಗಾಗಿ ದುಡಿಯುತ್ತಾಳೆ, ಇಡೀ ಬದುಕನ್ನು ನಿಮಗಾಗಿ ಮೀಸಲಿಡುತ್ತಾಳೆ
ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವುದು ಸಹ ಮುಖ್ಯವಾಗಿದೆ. ಯಾವುದೇ ದೇಶವು ಲಿಂಗ ಸಮಾನತೆಯನ್ನು ಸಾಧಿಸಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಳ್ಳಬಹುದು ಆದರೆ ಲಿಂಗ ಸಮಾನತೆಯ ಪರಿಕಲ್ಪನೆಯು ಅಸ್ತಿತ್ವದಲ್ಲಿಲ್ಲದ ಕೆಲವು ಸ್ಥಳಗಳಿವೆ.
ಯುಗಗಳವರೆಗೆ, ಸಮಾಜದಲ್ಲಿ ಜೀವನದ ಪ್ರತಿಯೊಂದು ಅಂಶಗಳಲ್ಲಿ ಪುರುಷರು ಹೆಚ್ಚಿನ ಸವಲತ್ತುಗಳನ್ನು ಹೊಂದಿದ್ದಾರೆ, ಅದು ಉತ್ತಮ ವೇತನ ಪ್ರಮಾಣ, ಸಾಮಾಜಿಕ ಸ್ಥಾನಮಾನ ಅಥವಾ ಮತದಾನದ ಹಕ್ಕುಗಳ ಶೇಕಡಾವಾರು ಆಗಿರಬಹುದು ಆದರೆ ಈಗ ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿದ್ದೇವೆ ಮತ್ತು ಜಗತ್ತು ನಿಧಾನವಾಗಿ ಲಿಂಗ ಸಮತೋಲನದತ್ತ ಸಾಗುತ್ತಿದೆ.
ಇದು ಸಮಾನ ವೇತನ ಶ್ರೇಣಿ, ಸಾಮಾಜಿಕ ಸ್ಥಾನಮಾನ ಮತ್ತು ಮಹಿಳೆಯರಿಗೆ ಸಮಾನ ಮತದಾನದ ಹಕ್ಕುಗಳನ್ನು ಒಳಗೊಂಡಿರುವ ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನತೆಯತ್ತ ಸಾಗುತ್ತಿದೆ.
“ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ತಾಯಿಯಾಗಿ,ಮಗಳಾಗಿ, ಜೀವನದ ಸ೦ಗಾತಿಯಾಗಿ,ಗೆಳತಿಯಾಗಿ,ಪ್ರೇಯಸಿಯಾಗಿ ಪ್ರಪ೦ಚವನ್ನೇ ಸಲಹುತ್ತಿರುವ ಮಹಾನ್ ಶಕ್ತಿ ಹೆಣ್ಣಿಗೆ ಕೋಟಿ ಕೋಟಿ ನಮನಗಳು”

ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ, ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ

Leave a Reply

error: Content is protected !!