ಎ.19: ಕೊಕ್ಕಡ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ಪುತ್ತಿಗೆ ಪ್ರತಿಷ್ಠಾ ವಾರ್ಷಿಕೋತ್ಸವ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ, ಪುತ್ತಿಗೆ ಪ್ರತಿಷ್ಠಾ ವಾರ್ಷಿಕೋತ್ಸವ ಶನಿವಾರ ಧಾರ್ಮಿಕ ಭಕ್ತಿಭಾವದ ನಡುವೆ ಜರಗಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅವರ ಕೃಪಾಶೀರ್ವಾದದೊಂದಿಗೆ, ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಮುಚ್ಚಿಂತಾಯ ಅವರ ಸಹಕಾರದೊಂದಿಗೆ ಈ ಮಹೋತ್ಸವ ನಡೆಯಲಿದೆ.

ಬೆಳಗ್ಗೆ 8 ಗಂಟೆಗೆ ಗಣಹೋಮ, ಕಳಶಪೂಜೆ, ದೇವರಿಗೆ ಕಳಶಾಭಿಷೇಕ, ನಾಗತಂಬಿಲ ಮತ್ತು ದೈವಗಳಿಗೆ ತಂಬಿಲ ಕಾರ್ಯಕ್ರಮಗಳು ನಡೆಯಲಿದ್ದು, ನಂತರ 9ರಿಂದ 1ರ ವರೆಗೆ ಭಜನಾ ಕಾರ್ಯಕ್ರಮ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 7 ಗಂಟೆಗೆ ಗಣಪತಿ ದೇವರಿಗೂ ಮಹಾ ವಿಷ್ಣುಮೂರ್ತಿ ದೇವರಿಗೂ ರಂಗಪೂಜೆ ಹಾಗೂ ದುರ್ಗಾ ಪೂಜೆ ನೆರವೇರಿಸಲಾಗುವುದು. ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ಪುತ್ತಿಗೆ ಕೊಕ್ಕಡ ಇದರ ಆಡಳಿತಾಧಿಕಾರಿ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಶಶಿ ಪುತ್ಯೆಮಜಲು, ಉಪಾಧ್ಯಕ್ಷ ಆನಂದ ಗೌಡ ಪುತ್ತಿಗೆ, ಕಾರ್ಯದರ್ಶಿ ಕಿಶೋರ್ ಕುಮಾರ್ ಪುತ್ಯೆ, ಜೊತೆ ಕಾರ್ಯದರ್ಶಿ ಬಾಬು ಪುತ್ಯೆಮಜಲು ಹಾಗೂ ಕೋಶಾಧಿಕಾರಿ ರಾಮಕೃಷ್ಣ ದೇವಾಡಿಗ ಅವರು ತಿಳಿಸಿದರು.

  •  

Leave a Reply

error: Content is protected !!