

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರವಾದ ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಕ್ರೈಸ್ತರ ಪ್ರಮುಖ ಧಾರ್ಮಿಕ ಆಚರಣೆಯಾದ ಗುಡ್ ಫ್ರೈಡೆ ದಿನವನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.
ಬೆಳಗ್ಗಿನ ಜಾವ 8 ಗಂಟೆಗೆ ಆರಂಭವಾದ ಪೂಜಾ ವಿಧಾನಗಳಲ್ಲಿ ಸಾವಿರಾರು ಭಕ್ತರು ನಾಡಿನ ವಿವಿಧ ಭಾಗಗಳಿಂದ ಆಗಮಿಸಿ, ಪ್ರಭು ಕ್ರಿಸ್ತನ ತ್ಯಾಗವನ್ನು ಸ್ಮರಿಸಿದರು. ಈ ಧಾರ್ಮಿಕ ವಿಧಾನಗಳಿಗೆ ಪುಣ್ಯ ಕ್ಷೇತ್ರದ ವಂ.ಫಾ. ಶಾಜಿ ಮಾತ್ಯು ನೇತೃತ್ವ ವಹಿಸಿ ಭಕ್ತರ ಹೃದಯಗಳನ್ನು ಸ್ಪರ್ಶಿಸುವ ರೀತಿಯಲ್ಲಿ ಪವಿತ್ರ ಆಚರಣೆಗೆ ದಿಕ್ಕು ನೀಡಿದರು.
ಎಸ್.ಎಂ.ವೈ.ಎಂ. ಯುವ ಸಂಘಟನೆಯಿಂದ ಆಯೋಜಿಸಲಾದ ಪ್ರತ್ಯಕ್ಷ ಶಿಲುಬೆಯ ಹಾದಿ ಕಾರ್ಯಕ್ರಮ ಭಕ್ತರಲ್ಲಿ ಭಾವನಾತ್ಮಕ ಪ್ರತಿಧ್ವನಿಯನ್ನು ಮೂಡಿಸಿತು. ಪ್ರಭು ಕ್ರಿಸ್ತನು ಹೊಂದಿದ ಯಾತನೆಗಳನ್ನು ನೇರವಾಗಿ ಅನುಭವಿಸುವಂತೆ ಮಾಡುವ ಈ ಧಾರ್ಮಿಕ ಮೆರವಣಿಗೆ ಭಕ್ತರನ್ನು ಕಣ್ಣೀರ ಕದಲಿಗೆ ತಲುಪಿಸಿತು.
ಈ ಸಂಧರ್ಭದಲ್ಲಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ಮತ್ತೆ ಒಂದು ಬಾರಿ ನಂಬಿಕೆಯ ಶಕ್ತಿ ಮತ್ತು ಭಕ್ತಿಯ ಪ್ರಭಾವವನ್ನು ಸಾರಿದ ಸ್ಥಳವಾಯಿತು.










