ನೆಲ್ಯಾಡಿ: ಈಸ್ಟರ್ ಹಬ್ಬದ ವೇಳೆ ಮನೆಗೆ ಕಳ್ಳರು ದಾಳಿ: ಚಿನ್ನಾಭರಣ ಕಳವು

ಶೇರ್ ಮಾಡಿ

ನೆಲ್ಯಾಡಿ: ಈಸ್ಟರ್ ಹಬ್ಬದ ಪ್ರಯುಕ್ತ ಮನೆಯವರು ಚರ್ಚಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ಏ.19ರ ರಾತ್ರಿ ನಡೆದಿದೆ.

ಸ್ಥಳೀಯ ಕೃಷಿಕ ಸಿ.ಎ. ಅಬ್ರಹಾಂ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದ್ದು, ಅವರು ಮತ್ತು ಕುಟುಂಬದವರು ಸಂಜೆ 6.30ರ ವೇಳೆಗೆ ಕೊಣಾಲು ಚರ್ಚಿಗೆ ತೆರಳಿದ್ದರು. ರಾತ್ರಿ 11.30ರ ಸುಮಾರಿಗೆ ಮನೆಗೆ ಹಿಂತಿರುಗಿದಾಗ ಮುಂಭಾಗದ ಬೀಗ ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.

ಮನೆಯೊಳಗೆ ಪರಿಶೀಲನೆ ನಡೆಸಿದಾಗ ಬೆಡ್‌ರೂಮ್‌ನ ಕೋಣೆಯ ಕಪಾಟಿನ ಬೀಗವನ್ನೂ ಮುರಿದು, ಅಂದಾಜು 8 ಪವನ್ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆರಳಚ್ಚು ತಜ್ಞರು, ಸ್ವಾನ ದಳದವರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  •  

Leave a Reply

error: Content is protected !!