ಅರಸಿನಮಕ್ಕಿಯಲ್ಲಿ 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಂಪನ್ನ ; ಮಹಿಳಾ ಸ್ವಾವಲಂಬನಕ್ಕೆ ಬಲ ನೀಡಿದ ಸೇವಾಭಾರತಿ

ಶೇರ್ ಮಾಡಿ

ಕೊಕ್ಕಡ: ಸೇವಾಭಾರತಿ (ರಿ.), ಕನ್ಯಾಡಿಯ ನೇತೃತ್ವದಲ್ಲಿ, ಸಬಲಿನಿ ಯೋಜನೆಯಡಿ, ಅರಸಿನಮಕ್ಕಿ ಗ್ರಾಮ ಪಂಚಾಯತಿ ಮತ್ತು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.) ಇದರ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾದ 31ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಅರಸಿನಮಕ್ಕಿ ಹತ್ಯಡ್ಕ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ವಹಿಸಿ, “ಸ್ವ ಉದ್ಯೋಗಕ್ಕಾಗುವ ತರಬೇತಿಗಳ ಮೂಲಕ ಗ್ರಾಮೀಣ ಮಹಿಳೆಯರು ಸ್ವ ಉದ್ಯೋಗ ಮಾರ್ಗ ಕಲ್ಪಿಸುತ್ತಿದೆ. ಕಲಿತ ವಿದ್ಯೆಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಯಶಸ್ಸಿಗೆ ಕೀಲಿ” ಎಂದು ಹೇಳಿದರು. ಸೇವಾಭಾರತಿ ಅಧ್ಯಕ್ಷೆ ಮತ್ತು ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಶ್ರೀಮತಿ ಸ್ವರ್ಣಗೌರಿ, “ಮಹಿಳೆಯರು ಬೇರೆ ಯಾರ ಮೇಲೂ ಅವಲಂಬಿತರಾಗದೆ ಸ್ವತಂತ್ರವಾಗಿ ಜೀವನ ನಡೆಸಬೇಕಾದ ಅಗತ್ಯ ಇಂದಿನ ಕಾಲದಲ್ಲಿ ಹೆಚ್ಚು ಇದೆ” ಎಂದು ತಿಳಿಸಿದರು.

ಟೈಲರಿಂಗ್ ತರಬೇತುದಾರರಾದ ಶ್ರೀಮತಿ ರೇಷ್ಮಾ ಜಯಪ್ರಸಾದ್ ಶೆಟ್ಟಿಗಾರ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದರು. ಸೇವಾಭಾರತಿಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು. ನಂತರ 29 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್, ಸೇವಾಭಾರತಿ ಸಲಹಾ ಮಂಡಳಿಯ ಉದಯಶಂಕರ್ ಕೆ., ಕಾರ್ಯದರ್ಶಿ ಬಾಲಕೃಷ್ಣ, ಮಾಜಿ ತಾ.ಪಂ. ಸದಸ್ಯೆ ಮಂಜುಳಾ ಕಾರಂತ್, ಶಿಶಿಲ ಬ್ಯಾಂಕ್ ಆಫ್ ಬರೋಡಾದ ಸಖಿ ಧನ್ಯ ಗಣೇಶ್ ಹೊಸ್ತೋಟ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಭವ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆಯನ್ನು ಸುಮ ಮಾಡಿದ್ದು, ಕು.ರಶ್ಮಿತ ವಂದಿಸಿದರು.

  •  

Leave a Reply

error: Content is protected !!