ಕೌಕ್ರಾಡಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಪೋಕ್ಸೋ ಕಾಯ್ದೆಯಡಿಯಲ್ಲಿ ಆರೋಪಿಗೆ ಬಂಧನ

ಶೇರ್ ಮಾಡಿ

ನೆಲ್ಯಾಡಿ: ಅಪ್ರಾಪ್ತೆಯೊಡನೆ ಬಲಾತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಧಾರಣೆಗೆ ಕಾರಣನಾದ ಆರೋಪದಲ್ಲಿ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

16 ವರ್ಷದ ಬಾದಿತೆ ಪ್ರಥಮ ಪಿಯುಸಿ ಬಿಟ್ಟು ಮನೆಯಲ್ಲಿದ್ದ ವೇಳೆ, ದೂರದ ಸಂಬಂಧಿಕನಾದ ರಮೇಶನ ಮನಗೆ ಫೆಬ್ರವರಿ 10ರಂದು ಭೇಟಿಕೊಟ್ಟಿದ್ದಾಳೆ. ಅದೇ ರಾತ್ರಿ, ರಮೇಶನು ಆಕೆಯ ಇಚ್ಛೆಗೆ ವಿರೋಧವಾಗಿ ಲೈಂಗಿಕ ಕೃತ್ಯ ಎಸಗಿದ್ದಾನೆ. ಮಾ.9, 27 ಮತ್ತು 28ರಂದು ಸಹ ಆಕೆಯ ವಿರೋಧದ ನಡುವೆಯೂ ದೈಹಿಕ ಸಂಪರ್ಕ ಮುಂದುವರೆಸಿದ್ದಾನೆ ಎಂಬ ಆರೋಪ ಇದೆ.

ಮಾ.29ರಂದು ಬಾದಿತೆಯು ಮಕ್ಕಳ ಸಹಾಯವಾಣಿ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಹಾಯದಿಂದ ಮಂಗಳೂರು ಕಾವೂರಿನ ಬಾಲಕಿಯರ ಬಾಲಮಂದಿರಕ್ಕೆ ದಾಖಲೆಯಾದ ಬಳಿಕ, ಎ.1ರಂದು ಆಪ್ತ ಸಮಾಲೋಚಕರಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಎ.2ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಬಾದಿತೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ನಂತರ ಬಾದಿತೆಯು ಬಾಲಕಿಯರ ಬಾಲಮಂದಿರದ ಸಿಬ್ಬಂದಿಯವರ ಜೊತೆಯಲ್ಲಿ ಬಾಲ ಮಂದಿರಕ್ಕೆ ಹೋಗಿದ್ದಾರೆ.

ಘಟನೆ ಕುರಿತು ಬಾದಿತೆ ನೀಡಿದ ದೂರಿನಂತೆ ರಮೇಶನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  •  

Leave a Reply

error: Content is protected !!