


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಮೇಷ ಸಂಕ್ರಮಣದಂದು ಆರಂಭಗೊಂಡ ವಿಷು ಜಾತ್ರಾಮಹೋತ್ಸವವು ಎ.23 ರಂದು ಶ್ರೀ ಮಂಜುನಾಥಸ್ವಾಮಿಯ ಮಹಾರಥೋತ್ಸವದೊಂದಿಗೆ ವಿಜೃಂಭಣೆಯಿಂದ ಸಂಪನ್ನವಾಯಿತು.

ಎ.13ರಿಂದ ಎ.23ರವರೆಗೆ ನಡೆದ ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎ.15ರಂದು ಅಣ್ಣಪ್ಪ ದೈವಗಳ ನೇಮ, ಎ.16ರಂದು ಉತ್ಸವ, 17ರಂದು ಬಲಿ ಹೊರಟು ಮತ್ತು ಹೊಸಕಟ್ಟೆ ಉತ್ಸವ, 18ರಂದು ಕಂಚಿಮಾರುಕಟ್ಟೆ ಉತ್ಸವ, 19ರಂದು ಲಲಿತೋದ್ಯಾನವನ ಕಟ್ಟೆ ಉತ್ಸವ, 20ರಂದು ಕೆರೆಕಟ್ಟೆ ಉತ್ಸವ, 21ರಂದು ಗೌರಿಮಾರುಕಟ್ಟೆ ಮತ್ತು ಚಂದ್ರಮಂಡಲ ಉತ್ಸವಗಳು ಭಕ್ತರ ಭಕ್ತಿಭಾವಕ್ಕೆ ಸಾಕ್ಷಿಯಾದವು.

ಎ.22ರ ರಾತ್ರಿ ನಡೆದ ಮಹಾ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದು ಧಾರ್ಮಿಕ ಸಂತ್ರುಪ್ತಿಯನ್ನು ಹೊಂದಿದರು.











