ಪಾಕ್‌ನಲ್ಲಿ 35-40 ಸೈನಿಕರು ಬಲಿ: ಭಯೋತ್ಪಾದಕರಿಗೆ ತಕ್ಕಪಾಠ ಕಲಿಸಿದ ‘ಆಪರೇಷನ್‌ ಸಿಂಧೂರ’ – ಭಾರತೀಯ ಸೇನೆಯಿಂದ ಇಂಚಿಂಚು ಮಾಹಿತಿ ಬಿಡುಗಡೆ

ಶೇರ್ ಮಾಡಿ

ದೆಹಲಿ: ಪಾಕಿಸ್ತಾನದ ಭಯೋತ್ಪಾದಕ ದಾಳಿಗೆ ತಕ್ಕಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್‌ ಸಿಂಧೂರ’ ಮೂಲಕ ಸುಮಾರು 35 ರಿಂದ 40 ಪಾಕ್‌ ಸೈನಿಕರು ಬಲಿಯಾದ್ದಾರೆ ಎಂದು ಸೇನೆ ಶನಿವಾರ ಮಾಹಿತಿ ನೀಡಿದೆ. ಮೇ 7ರಿಂದ 10ರ ವರೆಗೆ ನಡೆದ ಈ ತೀಕ್ಷ್ಣ ಕಾರ್ಯಾಚರಣೆಯ ಕುರಿತಾದ ಇಂಚಿಂಚು ವಿವರಗಳನ್ನು ಭಾನುವಾರ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.

ಭಾರತದ ಈ ಆಪರೇಷನ್‌ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿದ್ದು, ಪಾಕಿಸ್ತಾನಿ ನಾಗರಿಕರು ಅಥವಾ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ. ಉಗ್ರರ ತಾಣಗಳನ್ನು ಟಾರ್ಗೆಟ್‌ ಮಾಡಿ ನಿಖರವಾಗಿ ಹೊಡೆದಿದೆ.

ಮೇ 7ರ ಸಂಜೆಯ ನಂತರ ಪಾಕಿಸ್ತಾನವು ಭಾರತದ ನಾಗರಿಕ ಹಾಗೂ ಮಿಲಿಟರಿ ಪ್ರದೇಶಗಳ ಮೇಲೆ ಮಾನವರಹಿತ ವೈಮಾನಿಕ ವಾಹನಗಳು (UAV) ಹಾಗೂ ಸಣ್ಣ ಡ್ರೋನ್‌ಗಳ ಮೂಲಕ ದಾಳಿ ನಡೆಸಿತು. ಇವುಗಳಲ್ಲಿ ಮೂರು ಡ್ರೋನ್‌ಗಳು ಭಾರತೀಯ ಗಡಿಗೆ ನುಗ್ಗಿ ದಾಳಿ ನಡೆಸಿದರೂ, ಕಡಿಮೆ ಮಟ್ಟದ ಹಾನಿ ಮಾತ್ರ ಸಂಭವಿಸಿದೆ. ಭಾರತ, ಈ ಡ್ರೋನ್‌ ದಾಳಿಗಳನ್ನು ತಕ್ಷಣ ತಡೆಯಲು ಯಶಸ್ವಿಯಾಯಿತು.

ಭಾರತದ ಸೇನೆಯ ಪ್ರತಿಕ್ರಿಯೆಯ ಭಾಗವಾಗಿ, ಲಾಹೋರ್ ಮತ್ತು ಗುಜ್ರಾನ್‌ವಾಲಾ ಬಳಿ ಇರುವ ಪಾಕಿಸ್ತಾನದ ರೆಡಾರ್‌ ಸ್ಥಾಪನೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಲಾಗಿದೆ. ಈ ಮೂಲಕ ಉಗ್ರಗಾಮಿತ್ವ ಬೆಂಬಲಿಸುವ ಮೂಲಸೌಕರ್ಯಗಳನ್ನು ನಾಶಪಡಿಸಲಾಗಿದೆ.

“ನಾವು ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿದ್ದೇವೆ. ಪಾಕ್‌ನ ನಾಗರಿಕರು ಅಥವಾ ಮಿಲಿಟರಿ ನೆಲೆಗಳು ನಮ್ಮ ದಾಳಿಗೆ ಗುರಿಯಾಗಿಲ್ಲ,” ಎಂದು ಭಾರತೀಯ ಸೇನೆ ಪುನಃ ಪುನಃ ತಿಳಿಸಿದೆ. ಆದರೆ ಪಾಕಿಸ್ತಾನ ಭಾರತವನ್ನು ಉದ್ದೇಶಿಸಿ ದಾಳಿಗಳನ್ನು ನಡೆಸಿರುವುದಕ್ಕೆ ತಕ್ಕ ಪ್ರತೀಕಾರ ನೀಡಲಾಗಿದೆ.

  •  

Leave a Reply

error: Content is protected !!