

ನೆಲ್ಯಾಡಿ : ಭಾರತದ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ವಿರುದ್ಧ ಭಾರತದ ಸೇನೆ ಯಶಸ್ವಿಯಾಗಿ ಕೈಗೊಂಡ ಆಪರೇಷನ್ ಸಿಂಧೂರ ಕಾರ್ಯಚರಣೆಯ ಸ್ಮರಣಾರ್ಥವಾಗಿ “ಟೀಮ್ ಸಿಂಧೂರ ನೆಲ್ಯಾಡಿ” ಎಂಬ ಹೊಸ ಸಂಘಟನೆ ನೆಲ್ಯಾಡಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಈ ಸಂಘಟನೆಯ ಉದ್ಘಾಟನೆಯೊಂದಿಗೆ ಪದಾಧಿಕಾರಿಗಳ ಆಯ್ಕೆಯು ಕೂಡ ಯಶಸ್ವಿಯಾಗಿ ನಡೆಯಿದ್ದು, ಸಂಚಾಲಕರಾಗಿ ಶೀನಪ್ಪ ಗೌಡ ಬರಮೇಲು, ಅಧ್ಯಕ್ಷರಾಗಿ ತಿಮ್ಮಪ್ಪ ಗೌಡ ಬಾಯ್ತ್ರೋಡಿ, ಉಪಾಧ್ಯಕ್ಷರಾಗಿ ಪುರಂದರ ಗೌಡ ಪಟ್ಟೆಮಜಲು, ಕಾರ್ಯದರ್ಶಿಯಾಗಿ ಪ್ರಕಾಶ್ ಪೂಜಾರಿ ರಾಮನಗರ ಅವರುಗಳು ಆಯ್ಕೆಯಾದರು.
ಈ ಸಂಘಟನೆಯ ಸದಸ್ಯರು ಕಳೆದ ನೆಲ್ಯಾಡಿ ಗಣೇಶೋತ್ಸವದ ಸಂದರ್ಭದಲ್ಲಿ ರಾಷ್ಟ್ರ ಜಾಗೃತಿಗೆ ಸ್ಪಂದನೆ ನೀಡುವಂತೆ ತಾವು ಸ್ವತಃ ನಿರ್ಮಿಸಿದ ಆರ್ಟಿಕಲ್ ಗನ್ ಸ್ಥಬ್ಧಚಿತ್ರದ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಂಘಟನೆಯ ಪ್ರಮುಖ ಉದ್ದೇಶಗಳು:
ಅಸ್ಪೃಶ್ಯತೆ ಹಾಗೂ ಕೀಳರಿಮೆಗಳ ವಿರುದ್ಧ ಜಾಗೃತಿ ಮೂಡಿಸುವುದು, ರಾಷ್ಟ್ರ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಶ್ರಮದಾನ ಹಾಗೂ ಸ್ವಚ್ಛತಾ ಅಭಿಯಾನಗಳಲ್ಲಿ ಪಾಲ್ಗೊಳ್ಳುವುದು, ಅಸಹಾಯಕರಿಗೆ ಸಹಾಯ ಮಾಡುವುದು, ತುರ್ತು ಪರಿಸ್ಥಿತಿಗಳಲ್ಲಿ ಸ್ಪಂದಿಸುವುದು, ರಕ್ತದಾನ ಕಾರ್ಯಕ್ರಮಗಳನ್ನು ಆಯೋಜಿಸುವುದು ಸೇರಿದಂತೆ ಒಂದಷ್ಟು ಉದ್ದೇಶಗಳನ್ನು ಇಟ್ಟುಕೊಂಡು ಈ ಸಂಘಟನೆಯನ್ನು ಸ್ಥಾಪಿಸಲಾಗಿರುತ್ತದೆ.













