

ನೆಲ್ಯಾಡಿ: ಆಪರೇಷನ್ ಸಿಂದೂರ ಯಶಸ್ವಿಗಾಗಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನ, ಕುತ್ರಾಡಿ ಹಾರ್ಪಳ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಾಯರವರ ನೇತೃತ್ವದಲ್ಲಿ ಯೋಧರು ಧೈರ್ಯದಿಂದ, ಶಕ್ತಿಯಿಂದ ಹಾಗೂ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಲಿ ಎಂಬ ಉದ್ದೇಶದಿಂದ, ದೇಶದ ಭದ್ರತೆಗೆ ದೇವರ ಕೃಪೆ ಲಭಿಸಲಿ ಎಂಬ ನಂಬಿಕೆಯಿಂದ ಈ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟ್ ಅಧ್ಯಕ್ಷರಾದ ಸುಂದರ ಗೌಡ ಅತ್ರಿಜಾಲು, ಕಾರ್ಯದರ್ಶಿ ಸುರೇಶ ಪಡಿಪಂಡ, ಕೋಶಾಧಿಕಾರಿ ಸೀತಾರಾಮ ಗೌಡ ಕಾನಮನೆ, ಪದಾಧಿಕಾರಿಗಳು ಹಾಗೂ ಊರಿನ ಭಕ್ತರು ಭಾವಪೂರ್ಣವಾಗಿ ಪಾಲ್ಗೊಂಡರು.













