ನೆಲ್ಯಾಡಿ: ಅಂಬೇಡ್ಕರ್ ಭವನದ ಬಾಕಿ ಕಾಮಗಾರಿ ಸ್ಥಗಿತ: ಲೋಕಾಯುಕ್ತರಿಗೆ ಮನವಿ

ಶೇರ್ ಮಾಡಿ

ನೆಲ್ಯಾಡಿ:ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಅಂಬೇಡ್ಕರ್ ಭವನಕ್ಕೆ ಜಿಲ್ಲಾ ಪಂಚಾಯತಿ ವತಿಯಿಂದ 25 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಇದರಲ್ಲಿ 4 ಲಕ್ಷ ರೂಪಾಯಿ ಇನ್ನೂ ಬಾಕಿಯಿದೆ. ಈ ಬಾಕಿ ಹಣವನ್ನು ಭವನದ ಡೋರ್ ಬದಲಾವಣೆ, ಕಾಂಪೌಂಡ್ ನಿರ್ಮಾಣ ಹಾಗೂ “ಅಂಬೇಡ್ಕರ್ ಭವನ” ಎಂಬ ಫಲಕ ಅಳವಡಿಸಲು ಬಳಸಬೇಕೆಂದು ಕಳೆದ ಮೂರು ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಕೌಕ್ರಾಡಿ ಪಂಚಾಯತಿ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಗ್ರಾಮಸಭೆಯಲ್ಲಿಯೇ ಅಧಿಕಾರಿಗಳು ಈ ಬಾಕಿ ಹಣದಿಂದ ಅವಶ್ಯಕ ಕಾಮಗಾರಿಗಳನ್ನು ಮುಗಿಸುತ್ತೇವೆ ಎಂದು ಭರವಸೆ ನೀಡಿದ್ದರೂ, ಇಲ್ಲಿವರೆಗೆ ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ. ಪರಿಣಾಮವಾಗಿ ಗ್ರಾಮಸ್ಥರಲ್ಲಿ ನಿರಾಸೆ ಮೂಡಿದೆ. ಈ ಹಿನ್ನೆಲೆಯಲ್ಲಿ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಸದಸ್ಯರಾದ ಸತೀಶ್ ಪಳಿಕೆ ಅವರು ಲೋಕಾಯುಕ್ತರಿಗೆ ಮನವಿ ಸಲ್ಲಿಸಿ, ಕಾಮಗಾರಿ ವಿಳಂಬದ ಕುರಿತು ಸಮಗ್ರ ತನಿಖೆ ನಡೆಸಿ, ಬಾಕಿ ಅನುದಾನವನ್ನು ಸರಿಯಾಗಿ ಬಳಸುವಂತೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

  •  

Leave a Reply

error: Content is protected !!