ಪ್ರಮೋದ್ ಕುಮಾರ್ ರೈ ಬೆಳ್ಳಾರೆಗೆ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಕಲಾ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆಗಾಗಿ

ಶೇರ್ ಮಾಡಿ

ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವಾರ್ಷಿಕ ಸುವರ್ಣ ಸಂಭ್ರಮದ ಅಂಗವಾಗಿ ನೀಡುವ ‘ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಗೆ ಈ ಬಾರಿ ಪ್ರಸಿದ್ಧ ನೃತ್ಯ ನಿರ್ದೇಶಕ, ವಸ್ತ್ರ ವಿನ್ಯಾಸಕರಾದ ಬೆಳ್ಳಾರೆಯ ಕಲಾಮಂದಿರ್ ಸಂಸ್ಥಾಪಕರಾದ ಪ್ರಮೋದ್ ಕುಮಾರ್ ರೈ ಆಯ್ಕೆಯಾಗಿದ್ದಾರೆ.

ಬೃಹತ್ ಕಲಾ ಸೇವೆಯ ಹಿನ್ನಲೆಯಲ್ಲಿ ಅವರಿಗೆ ಈ ಗೌರವ ದೊರೆತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ.

ಕಳೆದ ಮೂರು ದಶಕಗಳಿಂದ ನೃತ್ಯ ಕಲಾವಿದ, ನಿರ್ದೇಶಕ ಮತ್ತು ವಸ್ತ್ರ ವಿನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಮೋದ್ ರೈ, ಹಳ್ಳಿಯಿಂದ ಹತ್ತು ರಾಜ್ಯಗಳವರೆಗೆ ನೃತ್ಯ ಪ್ರದರ್ಶನಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ರಾಷ್ಟ್ರದ ಮಟ್ಟದಲ್ಲಿ ಜಾಗ ಒದಗಿಸಿದ್ದಾರೆ. ಇವರ ನಿರ್ದೇಶನದ ನೃತ್ಯ ತಂಡವು ರಾಷ್ಟ್ರ ಮಟ್ಟದ ಪ್ರಶಸ್ತಿಯ ಜೊತೆಗೆ 250ಕ್ಕೂ ಅಧಿಕ ರಾಜ್ಯ ಪ್ರಶಸ್ತಿಗಳನ್ನೂ ಪಡೆದಿದೆ.

ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕಲಾ ಕೇಂದ್ರದ ತಂಡ ಜಮ್ಮು ಕಾಶ್ಮೀರ ನೃತ್ಯ ಪ್ರದರ್ಶನ ನೀಡಿದ್ದಾರೆ. ಇದರೊಂದಿಗೆ, ಕೇರಳದ ಗುರುವಾಯೂರು, ಮಹಾರಾಷ್ಟ್ರದ ಪುಣೆ, ತಮಿಳುನಾಡಿನ ಕೊಯಮುತ್ತೂರು ಮುಂತಾದ ರಾಜ್ಯಗಳಲ್ಲಿಯೂ ಇವರು ತಮ್ಮ ತಂಡದ ಮೂಲಕ ನೃತ್ಯ ಪ್ರದರ್ಶನ ಮಾಡಿಸಿದ್ದಾರೆ.

ವಿದ್ಯಾರ್ಥಿ ದಶೆಯಿಂದಲೇ ನೃತ್ಯ ಕ್ಷೇತ್ರದಲ್ಲಿ ಬೆಳೆದ ಪ್ರಮೋದ್ ರೈ ಅವರು, ಕನ್ನಡ ಚಲನಚಿತ್ರಗಳಲ್ಲಿ ಸಹ ನಟನಾಗಿ ಹಾಗೂ ವಿವಿಧ ಟಿವಿ ಡಾನ್ಸ್ ರಿಯಾಲಿಟಿ ಶೋಗಳಿಗೆ ನಿರ್ದೇಶನವನ್ನೂ ನೀಡಿದ ಸಾಧನೆಯು ಅವರ ಬಹುಮುಖ ಪ್ರತಿಭೆಯನ್ನು ತೋರಿಸುತ್ತದೆ. ಈ ಎಲ್ಲ ಸಾಧನೆಗಳಿಗೆ ಪುರಸ್ಕಾರವಾಗಿ, ಇವರ ನಿರಂತರ ಕಲಾ ಸೇವೆಯ ಮಾನ್ಯತೆ ರೂಪವಾಗಿ ಆರ್ಯಭಟ ಸಂಸ್ಥೆ ಸುವರ್ಣ ಮಹೋತ್ಸವ ವರ್ಷದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

  •  

Leave a Reply

error: Content is protected !!