ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ. ಎಂ ಎ ಸಲೀಂ ನೇಮಕ

ಶೇರ್ ಮಾಡಿ

ಬೆಂಗಳೂರು: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ (DG & IGP) ಹಿರಿಯ ಐಪಿಎಸ್​ ಅಧಿಕಾರಿ ಹಾಗೂ ಕನ್ನಡಿಗ ಡಾ.ಎಂ.ಎ ಸಲೀಂ (MA Salim) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ.ಎಂ.ಎ ಸಲೀಂ ಅವರು ಬುಧವಾರವೇ (ಮೇ.21) ಅಧಿಕಾರಿ ವಹಿಸಿಕೊಂಡಿದ್ದಾರೆ.

ಡಾ.ಎಂ.ಎ ಸಲೀಂ ಅವರು ಸದ್ಯ ಹಂಗಾಮಿ ಡಿಜಿ & ಐಜಿಯಾಗಿದ್ದಾರೆ. ಡಾ. ಅಲೋಕ್ ಮೋಹನ್​ ಅವರು ನೂತನ ಡಿಜಿಪಿ ಡಾ.ಎಂ.ಎ ಸಲೀಂ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಐಪಿಎಸ್​ ಅಧಿಕಾರಿ, ಕರ್ನಾಟಕದ ಪೊಲೀಸ್​ ಮಹಾನಿರ್ದೇಶಕರಾಗಿರುವ ಡಾ. ಅಲೋಕ ಮೋಹನ್​ ಅವರು ಬುಧವಾರವೇ ಸೇವೆಯಿಂದ ನಿವೃತ್ತರಾಗಿದ್ದಾರೆ.

ಡಾ.ಅಲೋಕ್ ಮೋಹನ್​ ಅವರಿಗೆ ಗೌರವ ಪಥಸಂಚಲನ ಮೂಲಕ ಬೀಳ್ಕೊಡಲಾಗುತ್ತದೆ. ಅಲೋಕ್​ ಮೋಹನ್ ಅವರ ಅವಧಿ ಏಪ್ರಿಲ್​ಗೆ ಮುಕ್ತಾಯವಾಗಿದ್ದರೂ ಡಿಜಿಪಿಯಾಗಿ ಎರಡು ವರ್ಷದ ಅವಧಿ ಮುಗಿಸುವ ಉದ್ದೇಶದಿಂದ ಮೂರು ವಾರಗಳ ಕಾಲ ಅವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿತ್ತು.

ಡಾ.ಎಂ.ಎ ಸಲೀಂ ಅವರು 1966ರ ಜೂನ್​ 25 ರಂದು ಬೆಂಗಳೂರಿನ ಚಿಕ್ಕಬಾಣವರದಲ್ಲಿ ಜನಿಸಿದರು. 1998ರಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1993ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿ ಪಡೆದ ಅವರು 2010ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಟ್ರಾಫಿಕ್​ ಮ್ಯಾನೇಜ್ಮೆಂಟ್​ ವಿಷಯದಲ್ಲಿ ಡಾಕ್ಟರೇಟ್​ ಪದವಿಯನ್ನು ಪಡೆದುಕೊಂಡಿದ್ದಾರೆ.

ಡಾ.ಎಂ.ಎ ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್​ನ ಅಧಿಕಾರಿಯಾಗಿದ್ದಾರೆ. ಅವರು ಈ ಹಿಂದೆ ಕಲಬುರಗಿಯಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ, ಕುಶಾಲನಗರ ಉಪ ವಿಭಾಗದಲ್ಲಿ ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪೊಲೀಸ್​ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಸಿಐಡಿ ಡಿಜಿಪಿಯಾಗಿದ್ದರು.

  •  

Leave a Reply

error: Content is protected !!