ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗಿನ ಉಪಹಾರ ಪ್ರಸಾದ ಯೋಜನೆಗೆ ಚಾಲನೆ

ಶೇರ್ ಮಾಡಿ

ಸುಬ್ರಹ್ಮಣ್ಯ: ಕರ್ನಾಟಕದ ಪ್ರಮುಖ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ, ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಬೆಳಗಿನ ಉಪಹಾರ ಪ್ರಸಾದದ ಮಹತ್ತ್ವದ ಯೋಜನೆಗೆ ಮೇ 30ರಂದು ಅಧಿಕೃತ ಚಾಲನೆ ದೊರೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಶ್ರೀ ಮಠದ ಪೀಠಾಧಿಪತಿ ಡಾ. ವಿದ್ಯಾಪ್ರಸನ್ನ ಶ್ರೀಗಳು ಭಕ್ತಿಯ ದೀಪ ಬೆಳಗಿಸಿ ಯೋಜನೆಗೆ ಚಾಲನೆ ನೀಡಿದರು.

ಈ ಧಾರ್ಮಿಕ, ಸಾಮಾಜಿಕ ಮಹತ್ವದ ಉಪಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸುಳ್ಯ ಶಾಸಕಿಯಾದ ಭಾಗೀರಥಿ ಮುರುಳ್ಯ, ಮಾಜಿ ಸಚಿವ ರಮಾನಾಥ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಗ್ರಾ.ಪಂ ಅಧ್ಯಕ್ಷೆ ಸುಜಾತ ಕಲ್ಲಾಜೆ, ನಾಗಭೂಷಣ್ ಗುರೂಜಿ ಬೆಂಗಳೂರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದ.ಕ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ, ಕಡಬ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾ ಪ್ರಸಾದ್, ಡಾ. ಜ್ಯೋತಿ ಆರ್ ಪ್ರಸಾದ್, ಸದಸ್ಯರು ಡಾ. ರಘು, ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಅಜಿತ್ ಕುಮಾರ್ ಉಪಸ್ಥಿತರಿದ್ದರು.

ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯರಾದ ಸತೀಶ್ ಕೂಜುಗೋಡು, ಅಚ್ಚುತ ಆಲ್ಕಬೆ, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೇಸುರಾಜ್, ಮಾಜಿ ಸದಸ್ಯರು ಬಾಲಕೃಷ್ಣ ಬಳ್ಳೇರಿ, ಕೃಷ್ಣಮೂರ್ತಿ ಭಟ್, ಮಾಧವ ದೇವರಗದ್ದೆ, ಕೆ.ಎಸ್.ಎಸ್ ಕಾಲೇಜು ಪ್ರಾಂಶುಪಾಲ ದಿನೇಶ್ ಪಿ.ಟಿ, ಎಸ್‌ಎಸ್‌ಪಿ‌ಯುಸಿ ಪ್ರಾಂಶುಪಾಲ ಸೋಮಶೇಖರ್, ಮುಖಂಡರು ಜಿ. ಕೃಷ್ಣಪ್ಪ, ಗ್ರಾ.ಪಂ ಸದಸ್ಯೆ ಸವಿತಾ ಭಟ್, ಶಿವರಾಮ ನೆಕ್ರಾಜೆ, ಕಿಶೋರ್ ಅರಂಪಾಡಿ, ಶಿವರಾಮ ರೈ, ಕಿರಣ್ ಬುಡ್ಡೆಗುತ್ತು, ಸುಬ್ರಹ್ಮಣ್ಯ ರಾವ್, ಗೋಪಾಲ ಎಣ್ಣೆಮಜಲು, ದಿನೇಶ್ ಎಣ್ಣೆಮಜಲು, ದಿನೇಶ್ ಮಡ್ತಿಲ, ವಸಂತ ಕಿರಿಭಾಗ, ಭವಾನಿಶಂಕರ ಅಡ್ತಲೆ, ಪ್ರಸನ್ನ, ಅಚ್ಚುತ ಸುಬ್ರಹ್ಮಣ್ಯ, ದಿನೇಶ್ ಸಂಪ್ಯಾಡಿ, ಮಾಧವ ಬಿ.ಟಿ, ರವಿ ಕಕ್ಕೆಪದವು, ಚಂದ್ರಶೇಖರ ನಾಯರ್, ಪ್ರಶಾಂತ್, ಭಾರತಿ ಬಿ.ಡಿ, ಗಣೇಶ್ ಪ್ರಸಾದ್, ಮನೋಜ್ ಕೈಕಂಬ, ನಾಗಮ್ಮ ನೂಚಿಲ, ತಾರಾ ಮಲ್ಲಾರ, ವಿಜಯ ಕೂಜುಗೋಡು, ಚೇತನಾ ಹರೀಶ್, ರವೀಂದ್ರ, ಮೋಹನ್ ದಾಸ್ ರೈ, ರವಿ ಕಕ್ಕೆಪದವು, ಪದ್ಮನಾಭ ಶೆಟ್ಟಿಗಾರ್, ಉದಯಕುಮಾರ್, ಶಿವ ಸುಬ್ರಹ್ಮಣ್ಯ, ಗೋಪಿನಾಥ ನಂಬೀಶನ್, ದಿನೇಶ್ ಅಗರಿಕಜೆ ಮೊದಲಾದವರು ಉಪಸ್ಥಿತರಿದ್ದರು.

ಈ ಯೋಜನೆಯ ಮೊದಲ ದಿನದಲ್ಲೇ ಸಾವಿರಾರು ಭಕ್ತರು ಉಪಹಾರ ಪ್ರಸಾದವನ್ನು ಸ್ವೀಕರಿಸಿ ಸಂತೋಷ ವ್ಯಕ್ತಪಡಿಸಿದರು. ಜನಸಾಮಾನ್ಯರಿಗೆ ಆರೈಕೆ ಮತ್ತು ಆರಾಮದಾಯಕ ಸೇವೆ ಒದಗಿಸುವ ನಿಟ್ಟಿನಲ್ಲಿ ದೇವಾಲಯ ಆಡಳಿತ ಮಂಡಳಿ ಕೈಗೊಂಡಿರುವ ಈ ಹೆಜ್ಜೆ ಭಕ್ತರಲ್ಲಿ ಕೃತಜ್ಞತೆಯ ಭಾವನೆ ಮೂಡಿಸಿದೆ.

  •  

Leave a Reply

error: Content is protected !!