


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿಯು ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ ಹಾಗೂ ಲೆಕ್ಕಪರಿಶೋಧಕರ ದಿನಾಚರಣೆ ಭಾವಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಪಿರೇರಿಯನ್ ಸರ್ವಿಸಸ್‌ನ ಮ್ಯಾನೇಜರ್ ಹಾಗೂ ಕಾಲೇಜಿನ ಹಿರಿಯ ವಿಧ್ಯಾರ್ಥಿನಿ ಸಿ ಎ ಸುಕನ್ಯಾ ಕಾಮತ್ ಉದ್ಘಾಟಿಸಿ ಮಾತನಾಡಿದ ಅವರು, “ಇಂದು ವಾಣಿಜ್ಯ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅನೇಕ ಉದ್ಯೋಗ ಹಾಗೂ ಸ್ವತಂತ್ರ ವೃತ್ತಿ ಅವಕಾಶಗಳಿವೆ. ಆದರೆ ಕೌಶಲ್ಯವೇ ಯಶಸ್ಸಿನ ದಾರಿ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ದೊರೆಯುವ ಎಲ್ಲ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಬೆಳೆಯಬೇಕು. ಅಯ್ಕೆಗಳಲ್ಲಿ ಇತರರ ಒತ್ತಡಕ್ಕೊಳಗಾಗಿ ತೀರ್ಮಾನ ಕೈಗೊಂಡರೆ ಮುಂದಿನದು ನಿಷ್ಪ್ರಯೋಜಕವಾಗಬಹುದು,” ಎಂದು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪ್ರಮೋದ್ ಕುಮಾರ್ ವಹಿಸಿದ್ದರು. ಅವರು ಮಾತನಾಡುತ್ತಾ “ಬಡತನದಿಂದ ಹೊರಬಂದು ವ್ಯಾಪಾರದ ಲೋಕದಲ್ಲಿ ಯಶಸ್ಸು ಗಳಿಸಿದ ಅನೇಕ ಉದ್ಯಮಿಗಳ ಸಾಹಸಮಯ ಜೀವನ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ,” ಎಂದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬೇಬಿ ಎನ್., ಸಂಯೋಜಕಿ ಉಪನ್ಯಾಸಕಿ ಸವಿತ, ಉಪನ್ಯಾಸಕಿಯರಾದ ಪ್ರಭಾವತಿ, ಶೋಭ ಹಾಗೂ ಅಶ್ವಿನಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿಧ್ಯಾರ್ಥಿನಿ ಅನಿಕ ತಂಡ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಧರ್ಮತೇಜ ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ಸಿರಿ ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿನಿಯರಾದ ಹಂಸಿನಿ ಭಿಡೆ ಮತ್ತು ಅಂಶುಲಾ ಕಾರ್ಯಕ್ರಮವನ್ನು ನಿರೂಪಿಸಿದರು.









