


ನೆಲ್ಯಾಡಿ: ಕಾರೊಂದು ಡಿವೈಡರ್ಗೆ ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡು ಪ್ರಯಾಣಿಕರೋರ್ವರು ಗಾಯಗೊಂಡಿರುವ ಘಟನೆ ಜೂ.27ರಂದು ತಡರಾತ್ರಿ 1 ಗಂಟೆ ವೇಳೆಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಉದನೆ ಪೇಟೆಯಲ್ಲಿ ನಡೆದಿದೆ.
ಮಂಗಳೂರು ಮಲ್ಲೂರು ಗ್ರಾಮದ ಬದ್ರಿಯಾನಗರ ನಿವಾಸಿ ಮೊಹಮ್ಮದ್ ಇಕ್ಬಾಲ್ (29ವ.) ಗಾಯಗೊಂಡಿದ್ದು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊಹಮ್ಮದ್ ಇಕ್ಬಾಲ್ ಅವರು ಬೆಂಗಳೂರುನಲ್ಲಿರುವ ಟಾಟಾ ಕಂಪನಿಯ ಗೂಡ್ಸ್ ಲಾರಿಯಲ್ಲಿ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು ರಜೆಯ ಮೇಲೆ ಊರಿಗೆ ಬಂದವರು ಅವರದ್ದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಲ್ತಾಫ್ ಎಂಬವರ ಪರಿಚಯದ ವ್ಯಕ್ತಿಯೊಬ್ಬರ ಸ್ವಿಫ್ಟ್ ಕಾರು ನಲ್ಲಿ ಮಾಣಿಯಿಂದ ಹೊರಟವರು ರಾತ್ರಿ 1 ಗಂಟೆ ವೇಳೆಗೆ ಉದನೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಕಾರು ರಾಷ್ಟ್ರೀಯ ಹೆದ್ದಾರಿ ಬದಿಯ ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಕಾರು ಜಖಂಗೊಂಡಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಇಕ್ಬಾಲ್ರವರಿಗೆ ಗಾಯವಾಗಿದ್ದು, ಅದೇ ರಸ್ತೆಯಲ್ಲಿ ತೆರಳುತ್ತಿದ್ದವರು ಉಪಚರಿಸಿ ಚಿಕಿತ್ಸೆಗೆ ಆಂಬುಲೆನ್ಸ್ನಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಮೊಹಮ್ಮದ್ ಇಕ್ಬಾಲ್ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.









