


ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕಣ್ಣಹಿತ್ತಿಲು ನಿವಾಸಿ ಹಾಗೂ ಕೌಕ್ರಾಡಿ ಪಂಚಾಯತಿನ ಮಾಜಿ ಉಪಾಧ್ಯಕ್ಷರಾಗಿದ್ದ ಕೆ. ರಾಜು(63) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು(ಜು.4) ಸ್ವಗೃಹದಲ್ಲಿ ನಿಧನರಾದರು.
ಮೃತರು ಕೃಷಿ ಮತ್ತು ಹೈನುಗಾರಿಕೆಯನ್ನು ತಮ್ಮ ಜೀವನ ವೃತ್ತಿಯಾಗಿ ಆಳವಾಗಿ ಕೈಗೊಂಡಿದ್ದವರು. ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ಕೌಕ್ರಾಡಿ ಪಂಚಾಯತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದವರು.
ಇವರಿಗೆ ಪತ್ನಿ, ಇಬ್ಬರು ಗಂಡುಮಕ್ಕಳು, ಒಬ್ಬ ಹೆಣ್ಣುಮಗಳು ಹಾಗೂ ಸಹೋದರ-ಸಹೋದರಿಯರು ಇದ್ದಾರೆ.









