


ಕೊಕ್ಕಡ: ರಾತ್ರಿ ಸುರಿದ ಮಳೆಗೆ ಕಳೆಂಜ ಗ್ರಾಮದ ಶಿಬರಾಜೆ ಬೈಲು ನೆಕ್ಕರಾಜೆ ಅಣ್ಣು ಗೌಡರ ಬಚ್ಚಲು ಮನೆಯ ಮಣ್ಣಿನ ಗೋಡೆ ಹಾಗೂ ಕಟ್ಟಿಗೆ ದಾಸ್ತಾನು ಮಳೆಯಿಂದಾಗಿ ಅಪಾಯಕಾರಿಯಾಗಿ ಬಿರುಕು ಬಿಟ್ಟ ಘಟನೆ ನಡೆದಿದೆ.
ಗೋಡೆ ಬಿರುಕು ಬಿಟ್ಟಿರುವುದು ಗಮನಿಸಿದ ಮನೆಯವರು ತಕ್ಷಣ ಶಿಶಿಲ ಅರಸಿನಮಕ್ಕಿಯ ಶೌರ್ಯ ಸ್ವಯಂಸೇವಕರಿಗೆ ಮಾಹಿತಿ ನೀಡಿದ್ದು ಅವಿನಾಶ್ ಭಿಡೆ, ಕುಶಾಲಪ್ಪ ಗೌಡ, ಹರೀಶ್ ವಳಗುಡ್ಡೆ, ಧನಂಜಯ ಗೌಡ, ಯೋಗೀಶ್ ಸೀಂಬೂಲು, ಕಾರ್ತಿಕ್ ಎಂ.ಬಿ.,ರಮೇಶ ಬೈರಕಟ್ಟ ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡದ ಬಿದ್ದು ಹಾನಿಯಾಗಬಹುದಾದ ಮೇಲ್ಛಾವಣಿಯ ಸಿಮೆಂಟ್ ಶೀಟ್‌ಗಳನ್ನು ಎಚ್ಚರಿಕೆಯಿಂದ ತೆಗೆದು, ಬಿರುಕು ಬಿಟ್ಟ ಗೋಡೆಯನ್ನು ತೆರವುಗೊಳಿಸಿ ಅಪಾಯ ತಪ್ಪಿಸಿದರು. ಮಳೆಗಾಲದ ಹಿನ್ನಲೆಯಲ್ಲಿ ಕಟ್ಟಿಗೆ ದಾಸ್ತಾನಿಗೆ ಟಾರ್ಪಾಲು ಹೊದಿಸಿ ಸುರಕ್ಷತೆ ಒದಗಿಸಿದರು.









