ರಾಜ್ಯ ಮಟ್ಟದ ಅಂಚೆ ಕುಂಚ ಸ್ಪರ್ಧೆಯಲ್ಲಿ ಸಾನ್ವಿ ನೇರಳ ಪ್ರಥಮ

ಶೇರ್ ಮಾಡಿ

ಪಂಜ: ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ‘ನಮ್ಮೂರ ಜಾತ್ರೆಗಳು’ ವಿಷಯದ ಕುರಿತು ನಡೆದ 22ನೇ ರಾಜ್ಯ ಮಟ್ಟದ ಅಂಚೆ ಕುಂಚ ಚಿತ್ರಕಲಾ ಸ್ಪರ್ಧೆಯಲ್ಲಿ ಸಾನ್ವಿ ನೇರಳ ಪ್ರಥಮ ಬಹುಮಾನ ಗಳಿಸಿದ್ದಾಳೆ.

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಸೋಮಶೇಖರ ನೇರಳ ಹಾಗೂ ಕವಿತಾ ದಂಪತಿಗಳ ಪುತ್ರಿ.ಇತ್ತೀಚೆಗೆ ವಿಜಯಕರ್ನಾಟಕ ಪತ್ರಿಕೆಯವರು ನಡೆಸಿದ ಪರಿಸರ ಜಾಗೃತಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲೂ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿರುತ್ತಾಳೆ. ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಮಾರ್ಗದರ್ಶನ ನೀಡಿರುತ್ತಾರೆ.

  •  

Leave a Reply

error: Content is protected !!