

ಕೊಕ್ಕಡ: ಇಲ್ಲಿಯ ನಿವಾಸಿ ವಾಮನ ನಾಯ್ಕ(70) ಅವರು ಜು.8ರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಂಜೆ ಸಮಯದಲ್ಲಿ ಅಡಿಕೆ ಸುಲಿಯುವ ಕೆಲಸ ನಿರತವಾಗಿದ್ದ ಸಂದರ್ಭದಲ್ಲೇ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಕೊಕ್ಕಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗಲೇ ಅವರು ಮೃತರಾಗಿರುವುದಾಗಿ ವೈದ್ಯರು ದೃಢಪಡಿಸಿದರು.
ವಾಮನ ನಾಯ್ಕ ಅವರು ಅಡಿಕೆ ಮರಗಳಿಗೆ ಮದ್ದು ಸಿಂಪಡಣೆ ಮತ್ತು ಅಡಿಕೆ ಸುಲಿಯುವ ಕೆಲಸಗಳಲ್ಲಿ ಸದಾ ತೊಡಗಿಸಿಕೊಂಡಿದ್ದವರು. ಕೆಲಸಪ್ರಿಯ ವ್ಯಕ್ತಿಯಾಗಿ, ಕೊಕ್ಕಡ ಸಮುದಾಯದಲ್ಲಿ ಆತ್ಮೀಯ ಸಂಬಂಧಗಳನ್ನು ಹೊಂದಿದ್ದವರು.
ಮೃತರು ಪತ್ನಿ ಸರಸ್ವತಿ, ಪುತ್ರರಾದ ಗಣೇಶ್, ಮಹೇಶ್, ರಮೇಶ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಇತರ ಬಂಧು ಬಳಗವನ್ನು ಅಗಲಿದ್ದಾರೆ.










