ತುಳು ಪ್ರತಿಭಾ ಕಾರಂಜಿ ಸ್ಪರ್ಧೆ: ಚಿತ್ರಕಲೆಯಲ್ಲಿ ಸಾನ್ವಿ ಶೆಟ್ಟಿ ಪ್ರಥಮ

ಶೇರ್ ಮಾಡಿ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ನೇತ್ರಾವತಿ ತುಳುಕೂಟ ರಾಮಕುಂಜ ಇದರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತೃತೀಯ ಭಾಷೆ ತುಳು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಾಗಿ ನಡೆಸಿದ ತುಳು ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕಾಣಿಯೂರು ಇಲ್ಲಿಯ 9ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಶೆಟ್ಟಿ, ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ.

ಈಕೆ ಎಣ್ಮೂರು ಕೆ. ಆರ್ ಸುದೀರ್ ಕುಮಾರ್ ಶೆಟ್ಟಿ ಮತ್ತು ನಯನ ಎಸ್ ಶೆಟ್ಟಿ ದಂಪತಿಗಳ ಪುತ್ರಿ. ಚಿತ್ರಕಲಾ ತರಬೇತಿಯನ್ನು ಸತೀಶ್ ಪಂಜ ನೀಡಿರುತ್ತಾರೆ.

  •  

Leave a Reply

error: Content is protected !!