ಕಡಬ ಸೈಂಟ್‌ ಜೋಕಿಮ್‌ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ, ಶಿಕ್ಷಕ ರಕ್ಷಕ ಸಂಘದ ಸಭೆ

ಶೇರ್ ಮಾಡಿ

ಕಡಬ: ಕಡಬ ಸೈಂಟ್‌ ಜೋಕಿಮ್‌ ಹಿ.ಪ್ರಾ.ಶಾಲೆಯ 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಶಿಕ್ಷಕ ರಕ್ಷಕ ಸಂಘದ ಸಭೆಯನ್ನು ಸೈಂಟ್‌ ಆನ್ಸ್‌ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ರೆ.ಫಾ ಸುನಿಲ್‌ ಪ್ರವೀಣ್‌ ಪಿಂಟೋ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ರೆ.ಫಾ. ಪ್ರಕಾಶ್‌ ಪೌಲ್‌ ಡಿಸೋಜಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಗೂ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಸೈಂಟ್‌ ಆನ್ಸ್‌ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ರೆ.ಫಾ ಸುನಿಲ್‌ ಪ್ರವೀಣ್‌ ಪಿಂಟೋ ವಹಿಸಿದ್ದು, ಮಕ್ಕಳ ಗುಣನಡತೆ ಹಾಗೂ ಮಕ್ಕಳು ಸರಿಯಾಗಿ ಸಮಯ ಪಾಲನೆ ಮಾಡಬೇಕು, ಪೋಷಕರ ಮಾತಿನ ರೀತಿ, ಧರಿಸುವ ಉಡುಪು, ನೋಡುವ ಶೈಲಿ ಸರಿಯಾಗಿರಬೇಕು. ಅದನ್ನು ಮಕ್ಕಳು ಅನುಸರಿಸುತ್ತಾರೆ, ಹೆತ್ತವರು ಜವಾಬ್ದಾರಿಯಿಂದ ನಡೆಯಬೇಕು ಎಂದು ಹೇಳಿದರು.

2025-26ನೇ ಸಾಲಿಗೆ ಶಿಕ್ಷಕ ರಕ್ಷಕ ಸಂಘಕ್ಕೆ ನೂತನ ಸದಸ್ಯರನ್ನು ಆಯ್ಕೆಮಾಡಲಾಯಿತು. ಉಪಾಧ್ಯಕ್ಷರಾಗಿ ಯೂನಸ್‌ ಪದಾಧಿಕಾರಿಗಳಾಗಿ ಯೋಗಿತಾ, ಮಹಮ್ಮದ್‌ ಹನೀಫ್‌, ಉಮಶಂಕರಿ, ಮಿಸ್ರಿಯಾ, ಶ್ರೀಲತಾ, ಗಣೇಶ್‌, ಹೇಮಲತಾ, ಸಿಮ್ಲಾ, ನವೀನಾಕ್ಷಿ, ಸುನೀತಾ, ನಿಶ್ಮಿತಾ, ಭವಾನಿ, ಕರಿಯಪ್ಪ ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಸೈಂಟ್‌ ಜೋಕಿಮ್ಸ್‌ ಹಿ.ಪ್ರಾ ಶಾಲಾ ಮುಖ್ಯಶಿಕ್ಷಕಿ ಸಿಸ್ಟರ್‌ ಹಿಲ್ಡಾ ರೊಡ್ರಿಗಸ್‌, 2024-25ನೇ ಸಾಲಿನ ರಕ್ಷಕ ಶಿಕ್ಷಕ ಸಂಘ ಉಪಾಧ್ಯಕ್ಷರ ಈಶ್ವರ್‌ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ಸಂಯೋಜಕರಾಗಿರುವ ಶಿಕ್ಷಕಿ ಜಲಜಾಕ್ಷಿ ಸ್ವಾಗತಿಸಿದರು, ಶಿಕ್ಷಕಿ ಚೈತ್ರ ವಂದಿಸಿದರು. ಶಿಕ್ಷಕಿ ಲತಾ ಪಿ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!