ಶಿರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ತಿಮ್ಮಯ್ಯ ಗೌಡ ನಿಧನ

ಶೇರ್ ಮಾಡಿ

ನೆಲ್ಯಾಡಿ : ಕಡಬ ತಾಲೂಕಿನ ಶಿರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಶಿರಾಡಿ ಗ್ರಾಮದ ಕುದ್ಕೋಳಿ ನಿವಾಸಿ ತಿಮ್ಮಯ್ಯ ಗೌಡ(59ವ.) ಅವರು ಅನಾರೋಗ್ಯದಿಂದ ಜು.14 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಿಮ್ಮಯ್ಯ ಗೌಡ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲೇ ಆರೈಕೆಯಲ್ಲಿದ್ದರು.

ಮೃತರು ಪತ್ನಿ ಪ್ರಿಯಲತಾ, ಪುತ್ರಿ ಸುಶ್ಮಿತಾ, ಪುತ್ರ ಸೂರಜ್ ಅವರನ್ನು ಅಗಲಿದ್ದಾರೆ.

  •  

Leave a Reply

error: Content is protected !!