ಸೌತಡ್ಕ ಆನೆ ದಾಳಿಗೆ ಬಲಿಯಾದ ಬಾಲಕೃಷ್ಣ ಶೆಟ್ಟಿ ಮನೆಗೆ ರಕ್ಷಿತ್ ಶಿವರಾಮ್ ಭೇಟಿ

ಶೇರ್ ಮಾಡಿ

ಕೊಕ್ಕಡ: ಎರಡು ಆನೆಗಳ ದಾಳಿಗೆ ಬಲಿಯಾದ ಸೌತಡ್ಕದ ಬಾಲಕೃಷ್ಣ ಶೆಟ್ಟಿ ಅವರ ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರು ಶುಕ್ರವಾರ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವಾನ ನೀಡಿದರು.

ರಕ್ಷಿತ್ ಶಿವರಾಮ್ ಮಾತನಾಡಿ, “ಅರಣ್ಯ ಸಚಿವರನ್ನು ಭೇಟಿಯಾಗಿ ಗರಿಷ್ಠ ಮಟ್ಟದ ಪರಿಹಾರ ದೊರಕಿಸಲು ಪ್ರಯತ್ನ ಮಾಡಿದ್ದೇನೆ ಹಾಗೂ ಮೃತ ಬಾಲಕೃಷ್ಣ ಶೆಟ್ಟಿ ಅವರ ಮಗಳು ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿರುವುದರಿಂದ, ಅವರಿಗೆ ಸರಕಾರಿ ಉದ್ಯೋಗ ದೊರಕಿಸಿ ಕೊಡುವಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಕಾಂಗ್ರೆಸ್ ಮುಖಂಡರಾದ ದಯಾನೀಶ್, ಸಿರಿಲ್ ಡಿಸೋಜ, ನಿತಿನ್ ಕಡೀರ, ಆಸಿಫ್ ಐಡಿಯಲ್, ಮಾಧವ ಸೌತಡ್ಕ, ಗಣೇಶ್ ಪೂಜಾರಿ, ಜಾನ್ಸನ್, ಗೋಪಾಲ, ನಾರಾಯಣ ಹಿಬರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  •  

Leave a Reply

error: Content is protected !!