ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಕೆಗೆ ಧರ್ಮಸ್ಥಳ ಯೋಜನೆಯಿಂದ ₹1.51 ಲಕ್ಷ ಸಹಾಯಧನ

ಶೇರ್ ಮಾಡಿ

ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ವತಿಯಿಂದ, ಪುದುವೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಹಿಂದೂ ರುದ್ರಭೂಮಿಗೆ ಸಿಲಿಕಾನ್ ಚೇಂಬರ್ ಅಳವಡಿಸುವ ಉದ್ದೇಶದಿಂದ ₹1,51,630 ಮೊತ್ತದ ಸಹಾಯಧನ ಮಂಜೂರಾತಿ ಪತ್ರ ವಿತರಣೆ ನಡೆಯಿತು.

ಈ ಸಹಾಯಧನ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿಗಳಾದ ಯಶೋಧರ ಕೆ. ಅವರು, ರುದ್ರಭೂಮಿ ಸಮಿತಿಯ ಅಧ್ಯಕ್ಷ ಬೊಮ್ಮಣ್ಣ ಗೌಡ ಅವರಿಗೆ ಹಾಗೂ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪುದುವೆಟ್ಟು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವಿಬಸಪ್ಪ ಗೌಡ, ಪಂ. ಅಧ್ಯಕ್ಷ ಪೂರ್ಣಾಕ್ಷ ಬಿ., ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷ ದೇವನಗೌಡ ಬೊಲ್ಮಾನ, ರುದ್ರಭೂಮಿ ಸಮಿತಿಯ ಪದಾಧಿಕಾರಿಗಳಾದ ಸಜೀವ್ ಹಾಗೂ ಚಿತ್ತರಂಜನ್ ಜೈನ್, ಪುದುವೆಟ್ಟು ಒಕ್ಕೂಟದ ಅಧ್ಯಕ್ಷ ಶಶಿಧರ ಮೀಯರು, ಅಪೂರ್ವ ಜೈನ್, ಕೆಮ್ಮಟೆ ಒಕ್ಕೂಟದ ಅಧ್ಯಕ್ಷ ಗಣೇಶ್ ಸಾಲಿಯಾನ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶೌರ್ಯ ಘಟಕದ ಸ್ವಯಂಸೇವಕರು, ಅಶೋಕ್ ಟ್ರೇಡರ್ಸ್ ಮಾಲಕರಾದ ಅಶೋಕ್, ವಲಯ ಮೇಲ್ವಿಚಾರಕ ರವೀಂದ್ರ ಬಿ., ಸೇವಾ ಪ್ರತಿನಿಧಿಗಳಾದ ಆನಂದ್ ಹಾಗೂ ಚೈತ್ರರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  •  

Leave a Reply

error: Content is protected !!