

ಶಿಶಿಲ: ಶಿಶಿಲ ಗ್ರಾಮದಲ್ಲಿ ಗುರುವಾರದಂದು ಭಾರಿ ಗಾಳಿ ಮಳೆ ಆರ್ಭಟಿಸಿದ್ದು, ಅಡ್ಡಹಳ್ಳದ ನಿವಾಸಿ ಹರೀಶ್ ಗೌಡ ಅವರ ಮನೆಗೆ ಹಾನಿಯಾಗಿದೆ.
ಘಟನೆಯ ವಿವರ ತಿಳಿದ ಕೂಡಲೇ ಶಿಶಿಲ ಗ್ರಾ.ಪಂ.ಅಧ್ಯಕ್ಷ ಸುಧೀನ್ ಡಿ, ಗ್ರಾಮಲೆಕ್ಕಾಧಿಕಾರಿ ಶಿವಕುಮಾರ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮನೆಗೆ ಉಂಟಾದ ಹಾನಿಯನ್ನು ಪರಿಶೀಲಿಸಿದ್ದಾರೆ.










