

ನೆಲ್ಯಾಡಿ: ನೆಲ್ಯಾಡಿ– ಕೌಕ್ರಾಡಿಯ 43ನೇ ವರುಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನೆಲ್ಯಾಡಿ- ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರದಂದು ನಡೆಯಿತು.
ಈ ಸಂದರ್ಭದಲ್ಲಿ ನೆಲ್ಯಾಡಿಯ 43ನೇ ವರುಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಮೋಹನ್ ಗೌಡ ಕಟ್ಟೆಮಜಲು, ಕಾರ್ಯದರ್ಶಿಯಾಗಿ ಅಣ್ಣಿ ಎಲ್ತಿಮಾರ್, ಉಪಾಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿಯಾಗಿ ರಾಕೇಶ್ ಎಸ್, ಜೊತೆ ಕಾರ್ಯದರ್ಶಿಯಾಗಿ ಸಂದೇಶ್ ಶೆಟ್ಟಿ ಅಮ್ಮುಂಜೆ, ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಟಿ.ಕೆ ಶಿವದಾಸ್, ಚಂದ್ರಶೇಖರ್ ಶೆಟ್ಟಿ, ಉಮೇಶ್ ಪೂಜಾರಿ ಪೋಸೋಳಿಗೆ, ರಘುನಾಥ ಕೆ., ಪ್ರಹ್ಲಾದ್ ಶೆಟ್ಟಿ, ಹರೀಶ್, ಸಂಪತ್ ಶೆಟ್ಟಿ, ದಯಾನಂದ ಆದರ್ಶ, ರಮೇಶ್ ಬಾಣಜಾಲ್ ಉಪಸ್ಥಿತರಿದ್ದರು.










