ಮಣ್ಣಗುಂಡಿಯಲ್ಲಿ ಮತ್ತೆ ಹೆದ್ದಾರಿಗೆ ಗುಡ್ಡ ಕುಸಿತ: ಸಂಚಾರ ಸಂಕಷ್ಟ

ಶೇರ್ ಮಾಡಿ

ನೆಲ್ಯಾಡಿ: ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಬಳಿ ಮತ್ತೆ ಬೆಳಗಿನ ಜಾವ ಸುಮಾರು 4ಗಂಟೆಗೆ ಗುಡ್ಡ ಕುಸಿತ ಉಂಟಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ಸೋಮವಾರದಂದು ಸಂಭವಿಸಿದೆ.

ಗುತ್ತಿಗೆದಾರರ ನಿರ್ಲಕ್ಷದಿಂದ ಇದು ನಾಲ್ಕನೇ ಬಾರಿ ರಸ್ತೆ ಹೆದ್ದಾರಿ ಸಂಪೂರ್ಣ ಬಂದ್ ಆಗುತ್ತಿದ್ದು ಮಣ್ಣು ಬಿದ್ದ ಕ್ಷಣ ಆ ಮಣ್ಣನ್ನು ತೆರವುಗೊಳಿಸುವುದು ಬಿಟ್ಟರೆ ಮಣ್ಣು ಬೀಳದಂತೆ ವೈಜ್ಞಾನಿಕ ರೀತಿಯಲ್ಲಿ ಯಾವುದೇ ರೀತಿಯಾದ ಶಾಶ್ವತ ಪರಿಹಾರವನ್ನು ಗುತ್ತಿಗೆದಾರರು ವಹಿಸದೇ ಇದ್ದರೂ ಅಧಿಕಾರಿ ವರ್ಗದವರು ಅವರ ಮೇಲೆ ಯಾವುದೇ ರೀತಿಯಾದ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಹಾಗೂ ಪ್ರಯಾಣಿಕರು ಆಕ್ರೋಶವನ್ನು  ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕರ ಹಿತಶಕ್ತಿಗೆ ಪ್ರತಿಭಟನೆ, ರಸ್ತೆತಡೆ ನಡೆಸಿದಲ್ಲಿ ಅಧಿಕಾರಿಗಳು ಸ್ವಪ್ರೇರಿತವಾಗಿ ಸಾರ್ವಜನಿಕರ ಮೇಲೆ ಬಂಧಿಸುವ, ಕೇಸ್ ಹಾಕುತ್ತಾರೆ ಆದರೆ ಹಲವು ಬಾರಿ ಅವೈಜ್ಞಾನಿಕ ಕಾಮಗಾರಿಗೆ ಗುಡ್ಡ ಕುಸಿದು ಹೆದ್ದಾರಿ ಬಂದ್ ಆಗುತ್ತಿದ್ದರು ಯಾಕೆ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ ಅಧಿಕಾರಿಗಳು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಕುಸಿದು ಹೆದ್ದಾರಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದು ಸಂಪೂರ್ಣ ಹೆದ್ದಾರಿ ಬಂದ್ ಆಗಿದ್ದು ಗುತ್ತಿಗೆದಾರರಿಂದ ಇದುವರೆಗೂ ಮಣ್ಣು ತೆರವು ಕಾರ್ಯ ಆರಂಭಗೊಂಡಿಲ್ಲ. ಕೆಲವು ವಾಹನ ಸವಾರರು ಬದಲಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾರೆ.

ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  •  

Leave a Reply

error: Content is protected !!