

ಮುಂಡಾಜೆ :ಬೆಳ್ತಂಗಡಿ ತಾಲೂಕಿನ ಹೆಮ್ಮೆಯಾದ ದೇಶದ ಏಕೈಕ “ಕಾರ್ಗಿಲ್ ವನ” ದಲ್ಲಿ ಈ ಬಾರಿ ಕಾರ್ಗಿಲ್ ವಿಜಯ ದಿವಸ್ ಅತ್ಯಂತ ಸರಳವಾಗಿ, ಆದರೆ ಭಾವನಾಪೂರ್ಣವಾಗಿ ಆಚರಿಸಲಾಯಿತು. ಧ್ವಜಾರೋಹಣ, ಜನರಲ್ ಅವರ ಸ್ಫೂರ್ತಿದಾಯಕ ಭಾಷಣ, ಸೈನಿಕರ ಬಲಿದಾನವನ್ನು ಸ್ಮರಿಸುವ ಮೌನ, ಹಾಗು ಗಿಡ ನೆಡುವ ವಿಜಯೋತ್ಸವ ಆಚರಿಸಲಾಯಿತು.
ಗಿಡ ನೆಟ್ಟು ವಿಜಯೋತ್ಸವ
ಕಾರ್ಗಿಲ್ ವನದ ರೂವಾರಿ ಹಾಗೂ ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಸಚಿನ್ ಜಿ. ಭಿಡೆ ಅವರ ನೇತೃತ್ವದಲ್ಲಿ, ಮಾಜಿ ಸೈನಿಕರ ಸಂಘದ ಸಹಯೋಗದಿಂದ ವಿವಿಧ ಹಸಿರು ಗಿಡಗಳು ನೆಡಲಾಯಿತು. ಕದಂಬ ಸೇರಿದಂತೆ ಸ್ಥಳೀಯ ತತ್ವದ ವಿವಿಧ ಸಸ್ಯಗಳನ್ನು ನೆಡುವ ಮೂಲಕ ಪ್ರಕೃತಿಯ ನೆರವಿನಿಂದ ಯೋಧರ ಶೌರ್ಯಕ್ಕೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಮೇಜರ್ ಜನರಲ್ ಎಂ.ವಿ. ಭಟ್, ಶ್ರೀಕಾಂತ್ ಗೊರೆ, ಸುನಿಲ್ ಶೆಣೈ, ಜಗನ್ನಾಥ್ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಯುದ್ಧದ ಹೊತ್ತಿನಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರ ಬಲಿದಾನವನ್ನು ಸ್ಮರಿಸಿ, ಒಂದು ನಿಮಿಷದ ಮೌನ ಪ್ರಾರ್ಥನೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಂಡಾಜೆಯ ಸಿ.ಎ.ಬ್ಯಾಂಕ್ ನಿರ್ದೇಶಕಿ ಸುಮಾ ಎಂ.ಗೋಖಲೆ, ಕೃಷಿಕ ವಿದ್ಯಾ ಬೆಂಡೆ, ಶಿವಣ್ಣ, ಅಶೋಕ್, ಸುನಿಲ್, ಅನಂತ ಹಾಗೂ ಪತ್ರಿಕಾ ವಿತರಕ ಭಾಲಚಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಸಚಿನ್ ಜಿ. ಭಿಡೆ ಸ್ವಾಗತಿಸಿದರು. ಮಾತೃಶ್ರೀ ಲತಾ ಜಿ. ಭಿಡೆ ವಂದಿಸಿದರು.










