

ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಕೆ.ವೈ ಮತ್ತು ಸುನಿಲ್ ಜೋಸೆಫ್ ಅವರಿಗೆ ಸಂಸ್ಥೆಯ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಬೆಥನಿ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಫಾ.ಜೈಸನ್ ಸೈಮನ್ ಓಐಸಿ, ಮಾತನಾಡಿ “ನಿಸ್ವಾರ್ಥ ಸೇವೆಯನ್ನು 25 ವರ್ಷಗಳ ಕಾಲ ನಿರಂತರವಾಗಿ ನೀಡಿದ ಇಬ್ಬರೂ ಸಿಬ್ಬಂದಿಗಳ ಸೇವಾಭಾವನೆ ಬೆಥನಿ ಸಂಸ್ಥೆಗೆ ಶಕ್ತಿಯಾಗಿದೆ. ಇಂತಹ ನಿಷ್ಠಾವಂತರು ಸಂಸ್ಥೆಯ ಹೆಮ್ಮೆಯಾಗಿದ್ದಾರೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಥನಿ ಐಟಿಐ ನಿರ್ದೇಶಕರಾದ ರೆ ಫಾ ಜಾರ್ಜ್ ಸ್ಯಾಮುವೆಲ್ ಓಐಸಿ, ಪ್ರಾಚಾರ್ಯರಾದ ಸಜಿ ಕೆ ಥಾಮಸ್, ತರಬೇತಿ ಅಧಿಕಾರಿ ಜೋನ್ ಪಿ.ಎನ್, ಹಾಗೂ ಸಿಬ್ಬಂದಿ ವಿಭಾಗದ ಕಾರ್ಯದರ್ಶಿ ಹರಿಪ್ರಸಾದ್ ರೈ ಉಪಸ್ಥಿತರಿದರು.
ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.










