

ನೆಲ್ಯಾಡಿ: ಜೆಸಿಐ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಜಿ ಎಫ್ ಎಸ್ ಅಂಕುರ್ ಜುಂಜುನ್ ವಾಲ ಅವರು ಆ.5, ಮಂಗಳವಾರರಂದು ಜೆಸಿಐ ನೆಲ್ಯಾಡಿ ಘಟಕದ ಆಹ್ವಾನಕ್ಕೆ ಸ್ಪಂದಿಸಿ ಅಧಿಕೃತ ಭೇಟಿಗಾಗಿ ಆಗಮಿಸುತ್ತಿದ್ದಾರೆ. ಕಾರ್ಯಕ್ರಮವು ಅಪರಾಹ್ನ 2.30ಕ್ಕೆ ಆರಂಭಗೊಳ್ಳಲಿದೆ.
ಅಧ್ಯಕ್ಷರ ಆಗಮನದ ಹಿನ್ನೆಲೆ, ನೆಲ್ಯಾಡಿ ಪೇಟೆಯಲ್ಲಿ ಭವ್ಯವಾದ ವಾಹನ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಿಂದಾಗಿ ಸ್ಥಳೀಯರಿಗೆ ರಾಷ್ಟ್ರೀಯ ಮಟ್ಟದ ಸೇವಾ ಚಟುವಟಿಕೆಗೆ ಭಾಗಿಯಾಗುವ ಅವಕಾಶ ಲಭಿಸಲಿದೆ.
ಜಾಥಾ ಬಳಿಕ, ಜೆಸಿಐ ನೆಲ್ಯಾಡಿ ವತಿಯಿಂದ ಗಾಂಧಿ ಮೈದಾನದಲ್ಲಿ 10 ಸಿಮೆಂಟ್ ಬೆಂಚುಗಳ ಲೋಕಾರ್ಪಣೆ ಸಮಾರಂಭ ನಡೆಯಲಿದೆ. ಸಾರ್ವಜನಿಕರ ಬಳಕೆಗಾಗಿ ಈ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮೀಣ ಹಿತದೃಷ್ಟಿಯಿಂದ ಇದು ಶ್ಲಾಘನೀಯ ಹೆಜ್ಜೆಯಾಗಿದೆ.
ಬಳಿಕ ಸಭಾ ಕಾರ್ಯಕ್ರಮವನ್ನು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಜೆಸಿಐ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮೀಣ ಮುಖಂಡರು ಉಪಸ್ಥಿತರಿರಲಿದ್ದಾರೆ. ಎಂದು ಜೆಸಿಐ ನೆಲ್ಯಾಡಿಯ ಅಧ್ಯಕ್ಷರಾದ ಜೆ ಎಫ್ ಪಿ ಡಾ.ಸುಧಾಕರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










