

ನೆಲ್ಯಾಡಿ: ಶ್ರೀ ಕ್ಷೇತ್ರ ಒಡಿಯೂರು ಗ್ರಾಮ ವಿಕಾಸ ಯೋಜನೆ ಗೋಳಿತೊಟ್ಟು ಘಟಕಸಮಿತಿ ವತಿಯಿಂದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನದ ಅಂಗವಾಗಿ ಸ್ವಚ್ಛತಾ ಆಂದೋಲನ ಗೋಳಿತ್ತೊಟ್ಟು ಉನ್ನತ ಹಿ.ಪ್ರಾ.ಶಾಲೆ ಹಾಗೂ ಗೋಳಿತ್ತೊಟ್ಟು ಅಂಗನವಾಡಿ ವಠಾರದಲ್ಲಿ ನಡೆಯಿತು.
ಗೋಳಿತ್ತೊಟ್ಟು ಶಾಲೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ, ಗೋಳಿತ್ತೊಟ್ಟು ಘಟಕಸಮಿತಿಯ ಅಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಯಶವಂತ ರೈ, ಗೋಳಿತ್ತೊಟ್ಟು ವಲಯದ ಸಂಯೋಜಕಿ ಭಾರತಿ ಡಿ.ಕೆ., ಗೋಳಿತ್ತೊಟ್ಟು ಗ್ರಾಮದ ಸೇವಾದೀಕ್ಷಿತೆ ತಿರುಮಲೇಶ್ವರಿ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಗೋಳಿತ್ತೊಟ್ಟು ಅಂಗನವಾಡಿ ವಠಾರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗೋಳಿತ್ತೊಟ್ಟು ಅಂಗನವಾಡಿಯ ಕಾರ್ಯಕರ್ತೆ ರೀತಾಕ್ಷಿ, ಸಹಾಯಕಿ ಅಮಿತಾ, ಆರೋಗ್ಯ ಕಾರ್ಯಕರ್ತೆ ಲೀನಾ ಡಿಸೋಜ, ಆಶಾ ಕಾರ್ಯಕರ್ತೆ ಜಯಮಾಲಾ, ಬಾಲವಿಕಾಸ ಸಮಿತಿ ಸದಸ್ಯರಾದ ಕುಶಾಲಪ್ಪ ಗೌಡ, ಮೈಮುನ, ಗೋಳಿತ್ತೊಟ್ಟು ವಲಯದ ಸಂಯೋಜಕಿ ಭಾರತಿ ಡಿ.ಕೆ., ಗೋಳಿತ್ತೊಟ್ಟು ಗ್ರಾಮದ ಸೇವಾದೀಕ್ಷಿತೆ ತಿರುಮಲೇಶ್ವರಿ ಹಾಗೂ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸದಸ್ಯರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ಗೋಳಿತ್ತೊಟ್ಟು ಪೇಟೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ರಿಕ್ಷಾ ಚಾಲಕರಾದ ತೀರ್ಥೆಶ್, ಹನೀಫ್, ಪ್ರದೀಪ್, ಶ್ಯಾಮ್ ಪ್ರಸಾದ್, ಸುರೇಶ್, ಬೆಳ್ಳಿಯಪ್ಪ, ನೋಣಯ್ಯ ಮರಂದೆ ಭಾಗವಹಿಸಿದ್ದರು.










