79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಮಂಗಳೂರು ನಗರ ಪೊಲೀಸ್‌-SAF ದಿಂದ ರೂಟ್ ಮಾರ್ಚ್

ಶೇರ್ ಮಾಡಿ

ಮಂಗಳೂರು: 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಗಳೂರು ನಗರ ಪೊಲೀಸ್ ಹಾಗೂ ವಿಶೇಷ ಕಾರ್ಯ ಪಡೆ (Special Action Force – SAF) ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ರಾಷ್ಟ್ರಭಕ್ತಿಯಿಂದ ಉತ್ಸಾಹಭರಿತ ರೂಟ್ ಮಾರ್ಚ್ ನಡೆಸಿದರು.

ನಗರದ ನವಭಾರತ ವೃತ್ತದಿಂದ ಆರಂಭವಾದ ಮೆರವಣಿಗೆ, ಅಂಬೇಡ್ಕರ್ ವೃತ್ತ, ಕ್ಲಾಕ್ ಟವರ್ ಮಾರ್ಗವಾಗಿ ಸಾಗುತ್ತ ಮಂಗಳೂರು ನಗರ ಪುರಭವನದವರೆಗೆ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಹೆಜ್ಜೆ ಹಾಕಿ ಗಮನ ಸೆಳೆದರು.

ಮೆರವಣಿಗೆಯ ದಾರಿಯಲ್ಲಿ ನಾಗರಿಕರು ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

  •  

Leave a Reply

error: Content is protected !!