Breaking: ಧರ್ಮಸ್ಥಳ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ: ಎಸ್‌ಐಟಿಯಿಂದ ಸಾಕ್ಷಿದಾರ ಮಾಸ್ಕ್‌ಮ್ಯಾನ್‌ ಬಂಧನ!

ಶೇರ್ ಮಾಡಿ

ಮಂಗಳೂರು: ಧರ್ಮಸ್ಥಳ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು (ಎಸ್‌ಐಟಿ) ಸಾಕ್ಷಿದಾರ ಮಾಸ್ಕ್‌ಮ್ಯಾನ್‌ ಅನ್ನು ಶನಿವಾರ ಬಂಧನ ಮಾಡಿದೆ. ಧರ್ಮಸ್ಥಳದಲ್ಲಿ ಎಸ್‌ಐಟಿ ಮುಖ್ಯಸ್ಥರ ಉಪಸ್ಥಿತಿಯಲ್ಲಿಯೇ ಬಂಧನವಾಗಿದೆ.

ಧರ್ಮಸ್ಥಳ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರನು ತೋರಿಸಿದ 20 ಕ್ಕೂ ಹೆಚ್ಚು ಕಡೆಗಳಲ್ಲಿ ಎಸ್‌ಐಟಿ ತಂಡವು ಕಳೆದ ಒಂದು ತಿಂಗಳಿಂದ ಹುಡುಕಾಟ ನಡೆಸಿತು. ಕಳೆದ ಒಂದು ವಾರದಿಂದ ಸಾಕ್ಷಿದಾರರನ್ನು ವಿಚಾರಣೆ ನಡೆಸುತ್ತಿತ್ತು. ಶನಿವಾರ ಬೆಳಗಿನ ಜಾವದವರೆಗೂ ವಿಚಾರಣೆ ನಡೆಸಿ ಬಳಿಕ ಬಂಧಿಸುವ ನಿರ್ಧಾರಕ್ಕೆ ಬಂದಿದೆ.

ದೂರುದಾರ ಹೇಳಿದ ಪ್ರಕರಣ ಸಂಪೂರ್ಣ ಸುಳ್ಳು ಎಂದು ತನಿಖೆಯಿಂದ ಬೆಳಕಿಗೆ ಬಂದ ಕಾರಣ ಅಂತಿಮವಾಗಿ ‌ದೂರುದಾರನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ಆಗಸ್ಟ್‌ 22 ರಂದು ಮಂಗಳೂರು ಸಕ್ಷಮ ಪ್ರಾಧಿಕಾರದಿಂದ ವಿಟಗ ನೆಸ್ ಪ್ರೊಟೆಕ್ಷನ್ ಕಾಯಿದೆಯನ್ನು ರದ್ದು ಮಾಡಿದ್ದು. ಆ.23 ರಂದು ಬೆಳಗ್ಗೆ ಬಂಧಿಸಿ 11 ಗಂಟೆಗೆ ಬೆಳ್ತಂಗಡಿ ಕೋರ್ಟ್‌ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ ಎಂದು ಎಸ್‌ಐಟಿ ಮೂಲಗಳಿಂದ ತಿಳಿದು ಬಂದಿದೆ.

  •  

Leave a Reply

error: Content is protected !!