

ನೆಲ್ಯಾಡಿ: ಮಂಗಳೂರು ಸ್ಕೇಟ್ ಸಿಟಿಯಲ್ಲಿ ನಡೆದ ಜಿಲ್ಲಾ ಮಟ್ಟದ ಇನ್ಲೈನ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪದಕವನ್ನು ಪಡೆದುಕೊಂಡಿದ್ದಾರೆ.
2ಕಿ.ಮೀ ಓಟದಲ್ಲಿ ದಿಯಾನ್ ಚಿನ್ನ, 500 ಹಾಗೂ 100 ಮೀ. ಓಟದಲ್ಲಿ ಶಿವ ಸುಬ್ರಹ್ಮಣ್ಯ ಬೆಳ್ಳಿ ರಾಜ್ಯಮಟ್ಟಕ್ಕೆ ಆಯ್ಕೆ, 1000 ಮೀ. ಓಟದಲ್ಲಿ ಕೃತಿಕ್ ಬೆಳ್ಳಿ, 500 ಹಾಗೂ 100 ಮೀ. ಓಟದಲ್ಲಿ ಯಕ್ಷಿತ್ ಕಂಚು, 1000 ಮೀ. ಓಟದಲ್ಲಿ ಶ್ರೇಯಸ್ ಕಂಚು ಗೆದ್ದಿದ್ದಾರೆ.
ಈ ಸಾಧನೆಗೆ ಸಂಸ್ಥೆಯ ಸಂಚಾಲಕರಾದ ಫಾ. ಸಾಮ್ಯುವೆಲ್ ಚಾರ್ಜ್, ಫಾ. ಜೈಸನ್ ಸೈಮನ್, ಪ್ರಾಂಶುಪಾಲ ಫಾ.ವರ್ಗೀಸ್ ಕೈಪನಡ್ಕ, ಉಪಪ್ರಾಂಶುಪಾಲ ಜೋಸ್ ಎಂ.ಜೆ, ಮುಖ್ಯಶಿಕ್ಷಕ ಜಾರ್ಜ್ ಕೆ. ತೋಮಸ್ ಅಭಿನಂದನೆ ಸಲ್ಲಿಸಿದರು.











