

ಉಜಿರೆ: ಕಳೆಂಜ ಗ್ರಾಮದ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ (ರಿ) ನಡೆಸಿಕೊಂಡು ಬರುತ್ತಿರುವ ನಂದಗೋಕುಲ ಗೋಶಾಲೆಯ ವತಿಯಿಂದ, “ಪುಣ್ಯಕೋಟಿಯನ್ನು ಉಳಿಸಿ ಕೋಟಿ ಕೋಟಿ ಪುಣ್ಯ ಗಳಿಸಿ” ಎಂಬ ಶೀರ್ಷಿಕೆಯಲ್ಲಿ “ಗೋವು ಉಳಿದರೆ ನಾವು ಅಭಿಯಾನ 2026”ಕ್ಕೆ ಮಂಗಳವಾರ ಬೆಳಿಗ್ಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಚಾಲನೆ ದೊರಕಿತು.
ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸುಬ್ರಹ್ಮಣ್ಯ ತೋಳ್ಪಡಿತ್ತಾಯ ಅವರಿಗೆ ಗೋಶಾಲೆಯ ಕಾಣಿಕೆ ಹುಂಡಿಯನ್ನು ನೀಡುವ ಮೂಲಕ ಅಭಿಯಾನವನ್ನು ವಿದ್ಯುಕ್ತವಾಗಿ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ಡಾ. ಎಂ.ಎಂ. ದಯಾಕರ್, “ಗೋಪ್ರೇಮಿಗಳು ಕಾಣಿಕೆ ಡಬ್ಬಿಯನ್ನು ಪಡೆದು, ಯಥಾಶಕ್ತಿ ಕಾಣಿಕೆಯನ್ನು ನೀಡಿ, ಗೋಗ್ರಾಸಕ್ಕೆ ನೆರವಾಗಬೇಕು. ಇದರಿಂದ ಪ್ರತಿಯೊಬ್ಬರೂ ಪುಣ್ಯವನ್ನು ಸಂಪಾದಿಸಬಹುದು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪದ್ಮನಾಭ ಶೆಟ್ಟಿಗಾರ್, ಭರತ್ ಕುಮಾರ್, ಪ್ರಶಾಂತ್ ಜೈನ್, ನವೀನ್ ನೆರಿಯ ಮೊದಲಾದವರು ಉಪಸ್ಥಿತರಿದ್ದರು.











