ಸೌತಡ್ಕ ಬಯಲು ಆಲಯ ಗಣಪನ ಚೌತಿ ವೈಭವ – ಐವತ್ತು ಸಾವಿರಕ್ಕೂ ಅಧಿಕ ಭಕ್ತರ ಪಾಲ್ಗೊಳ್ಳುವಿಕೆ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ “ಬಯಲು ಆಲಯ ಗಣಪ” ಎಂದೇ ಪ್ರಸಿದ್ಧಿ ಪಡೆದ ಗಣೇಶ ಚತುರ್ಥಿ ಮಹೋತ್ಸವವು ಈ ಬಾರಿಯೂ ಅದ್ದೂರಿಯಾಗಿ ಜರಗಿತು.

ಧಾರ್ಮಿಕ ಕಾರ್ಯಕ್ರಮಗಳಾದ ಬೆಳಿಗ್ಗೆ 108 ಕಾಯಿ ಗಣಹೋಮ, ರಂಗಪೂಜೆ ಹಾಗೂ ಮಹಾಪೂಜೆ ನೆರವೇರಿತು. ಸುಮಾರು ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಈ ಹಬ್ಬದಲ್ಲಿ ಪಾಲ್ಗೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾದರು. ವಿಪರೀತ ಮಳೆಯ ನಡುವೆಯೂ ಬೆಳಗಿನ ಜಾವ ಐದು ಗಂಟೆಯಿಂದಲೇ ನಾಡಿನ ಮೂಲೆಮೂಲೆಗಳಿಂದ ಭಕ್ತರ ದಂಡು ಹರಿದು ಬಂದು ದೇವರ ದರ್ಶನ ಪಡೆದರು. ದೇವಸ್ಥಾನ ಪ್ರಾಂಗಣವೇ ಭಕ್ತರ ಮಹಾಸಾಗರವಾಗಿ ಮಾರ್ಪಟ್ಟಿದ್ದು.

ದಿನವಿಡೀ ಸೇವಾ ಕೌಂಟರ್‌ಗಳಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಸೇವೆಗಳನ್ನು ಸಲ್ಲಿಸಿದರು. ಅವಲಕ್ಕಿ ಪಂಚಕಜ್ಜಾಯ 10,450 ರಸೀದಿ, ಅಪ್ಪ ಪ್ರಸಾದ 11,215, ಕಡ್ಲೆ ಪಂಚಕಜ್ಜಾಯ 3,117, ಲಾಡು ಪ್ರಸಾದ 4,635, ಮೋದಕ ಪ್ರಸಾದ 5,004 ಮತ್ತು ವಿಶೇಷ ಗಣಹೋಮಕ್ಕೆ 25 ಸೇವಾ ರಸೀದಿಗಳಾಗಿ ಒಟ್ಟು 16,62,942 ರೂ. ಮೊತ್ತ ಜಮೆಯಾಗಿದ್ದು, ಭಕ್ತರ ಭಕ್ತಿಭಾವದ ಪ್ರತೀಕವಾಯಿತು. ಮಧ್ಯಾಹ್ನದ ಭೋಜನ ಪ್ರಸಾದದಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಅನ್ನಸಂತರ್ಪಣೆ ಸೇವೆಯಿಂದ ದೇವರ ಅನುಗ್ರಹವನ್ನು ಪಡೆದರು.

ಚೌತಿ ಹಬ್ಬದ ಯಶಸ್ಸಿಗೆ ಅನೇಕ ಭಕ್ತರ ಸೇವಾಭಾವ ನೆರವಾಯಿತು. ಮೈಸೂರಿನ ಬಾಲಕೃಷ್ಣ ಪೆಲತ್ತಾಯ, ಹಾಸನದ ಮೇಘರಾಜ ತರಕಾರಿಯನ್ನು ಒದಗಿಸಿದರು. ಸೋಮಶೇಖರ ಹಾಸನ ಹೂ-ಫಲ ವಸ್ತುವನ್ನು ಸಮರ್ಪಿಸಿದರೆ, ಬೆಂಗಳೂರಿನ ವೆಂಕಟೇಶ್, ಕೆ.ಎಲ್. ಶ್ರೀನಿವಾಸ್ ಹಾಗೂ ಕಲ್ಲಡ್ಕದ ನಿತಿನ್ ದಾಸ್ ಹೂವಿನ ಅಲಂಕಾರ ಸೇವೆಯಲ್ಲಿ ಭಾಗವಹಿಸಿದರು. ಕಾವು ಕೇಸರಿ ಬಳಗ ಮತ್ತು ದುರ್ಗವಾಹಿನಿ ಮಹಿಳಾ ಸಂಘವು ಪಾನಕ ವಿತರಣೆ ಮಾಡಿದರು.

ಮಹೋತ್ಸವದ ಸಂದರ್ಭದಲ್ಲಿ ಅನೇಕ ಗಣ್ಯರು ಸೌತಡ್ಕ ಬಯಲು ಆಲಯಕ್ಕೆ ಆಗಮಿಸಿ ದೇವರ ಅನುಗ್ರಹ ಪಡೆದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಿ.ಪಕ್ಕಳ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತಗುಂಡಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ದೇವಸ್ಥಾನದ ಮಾಜಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ಮೊದಲಾದವರು ಹಬ್ಬದಲ್ಲಿ ಪಾಲ್ಗೊಂಡರು.

ಈ ಮಹೋತ್ಸವದ ಯಶಸ್ಸಿಗೆ ಕಾರಣರಾದ ಎಲ್ಲ ಭಕ್ತರಿಗೂ ಹಾಗೂ ಸಹಾಯಕರಿಸಿದ ಎಲ್ಲರಿಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೆ. ಹಾಗೂ ಸದಸ್ಯರು, ದೇವಸ್ಥಾನದಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್

  •  

Leave a Reply

error: Content is protected !!