ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ

ಶೇರ್ ಮಾಡಿ

ನೇಸರ ನ1:  ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು.ಚಂಡೆ ವಾದ್ಯದೊಂದಿಗೆ ಅತಿಥಿ ಗಣ್ಯರನ್ನು ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಧ್ವಜಾರೋಹಣ ನೆರೆವೇರಿಸಿದ ಬಳಿಕ ತಾಯಿ ಭುವನೇಶ್ವರಿ ದೇವಿಗೆ ಅತಿಥಿ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಮುಖ್ಯ ಅತಿಥಿ ಡಾ. ನೂರಂದಪ್ಪ ಕನ್ನಡ ಪ್ರಾದ್ಯಾಪಕರು ವಿಶ್ವವಿದ್ಯಾನಿಲಯ ಫಟಕ ಕಾಲೇಜು ನೆಲ್ಯಾಡಿ ರವರು ಕರ್ನಾಟಕ ನಕ್ಷೆ ರಚನೆ ಗೊಂಡ ಬಗ್ಗೆ, ಶಾಂತಕವಿಗಳು 1918 ರಲ್ಲಿ ಮೊಟ್ಟಮೊದಲು ಭುವನೇಶ್ವರಿ ದೇವಿಯನ್ನು ಪರಿಚಯಿಸಿದ ರೀತಿ, ಕನ್ನಡ ಭಾಷೆಯ ಬಗ್ಗೆ ನಮಗೆ ಇರಬೇಕಾದ ಅಭಿಮಾನವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಅಬ್ರಹಾಂ ವರ್ಗೀಸ್ ಸಂಚಾಲಕರು, ಸಂತ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ ವಹಿಸಿದರು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಸಲ್ಲಿಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಏಲಿಯಾಸ್ ಎಮ್.ಕೆ, ಅಂಗ್ಲಮಾದ್ಯಮದ ಮುಖ್ಯಗುರು ಹರಿಪ್ರಸಾದ್.ಕೆ. ಕನ್ನಡ ವಿಭಾಗದ ಮುಖ್ಯಗುರು ಎಮ್.ವೈ.ತೋಮಸ್ ಉಪಸ್ಥಿತರಿದ್ದರು ವಿದ್ಯಾರ್ಥಿಗಳಿಗೆ ಸಾಂಸ್ಕ್ರತಿಕ ಸ್ವರ್ಧೆಯನ್ನು ಆಯೋಜಿಸಲಾಯಿತು, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಕೈ ಬರಹ ಸ್ವರ್ಧೆಯನ್ನು ನಡೆಸಲಾಗಿತು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಕನ್ನಡ ಉಪನ್ಯಾಸಕ ಚೇತನ್ ಕುಮಾರ್.ಟಿ, ವಿದ್ಯಾರ್ಥಿಗಳಾದ ಗ್ರೀಷ್ಮ, ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು, ಕಾಲೇಜಿನ ಪ್ರಾಂಶುಪಾಲ ಏಲಿಯಾಸ್.ಎಮ್.ಕೆ ಸ್ವಾಗತಿಸಿ, ಅಂಗ್ಲಮಾದ್ಯಮದ ಮುಖ್ಯಗುರು ಹರಿಪ್ರಸಾದ್.ಕೆ ವಂದನರ್ಪಣೆ ನೆರೆವೇರಿಸಿದರು. ಸಭೆಯಲ್ಲಿ ಶಿಕ್ಷಕರು ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

Leave a Reply

error: Content is protected !!