ನೇಸರ ನ1: 66ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ನೆಲ್ಯಾಡಿಯಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಸಂಚಾಲಕ ರೇ|ಫಾ|ಸತ್ಯನ್ ತೋಮಸ್ ಒಐಸಿ ನೆರೆವೇರಿಸಿದರು. ಬೆಥನಿ ರಜತಮಹೋತ್ಸವ ಸ್ಮಾರಕ ಸಭಾಂಗಣದಲ್ಲಿ ಸಭಾಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ರೇ|ಫಾ|ಸತ್ಯನ್ ತೋಮಸ್ ಒಐಸಿ ವಹಿಸಿದರು ನಾಡಿನ ಎಲ್ಲಾ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಹಾರೈಸಿದರು ಮತ್ತು ಕನ್ನಡ ಭಾಷೆಯ ಪ್ರೌಢಿಮೆಯನ್ನು ತಿಳಿಸಿದರು. ಮುಖ್ಯ ಅತಿಥಿಯಾಗಿ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತ ನಾರಾಯಣ ಭಟ್ ರಾಮಕುಂಜ ಮಾತನಾಡುತ್ತ ಅತ್ಯಂತ ಪ್ರಾಚೀನ ಭಾಷೆ ಕನ್ನಡ, ಕನ್ನಡಕ್ಕೆ 8 ಜ್ಞಾನ ಪೀಠ ಪ್ರಶಸ್ತಿ ಹಾಗೂ ಇತರ ಅನೇಕ ಪ್ರಶಸ್ತಿಗಳು ಲಭಿಸಿವೆ, ಒಬ್ಬ ವ್ಯಕ್ತಿ ಸಾಮಾನ್ಯವಾಗಿ 20 ಭಾಷೆಯನ್ನು ಕಲಿಯಲು ಸಾಧ್ಯವೆಂದರು, ಕನ್ನಡ ಭಾಷೆ ಶ್ರೀಮಂತ ಭಾಷೆ, ಕನ್ನಡವನ್ನು ಬೆಳೆಸುವುದರ ಜೊತೆಗೆ ಇತರ ಭಾಷೆಯನ್ನು ಅಧ್ಯಯನ ಮಾಡಬೇಕೆಂದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರು ಕನ್ನಡ ಭಾಷೆ ನಮ್ಮ ಮನೆ ಮಾತಾಗಿರಬೇಕು, ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕೆಂದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ತೋಮಸ್ ಬಿಜಿಲಿ ಒಐಸಿ, ಉಪಪ್ರಾಂಶುಪಾಲರಾದ ಜೋಸ್.ಎಮ್.ಜೆ, ಮುಖ್ಯಗುರು ಜಾರ್ಜ್.ಕೆ.ತೋಮಸ್ ಹಾಗೂ ಸನ್ಮಾನಿತರಾದ ಅಲ್ಪೋನ್ಸರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಅಲ್ಪೋನ್ಸ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಶ್ರೇಯಾವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿ ಏಲಿಜಬೆತ್, ವಿದ್ಯಾರ್ಥಿಗಳಾದ ಸಾನ್ವಿ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು, ಜಿನಾ ಸ್ವಾಗತಿಸಿ, ಲಿಯಾ ಮಾಥ್ಯು ವಂದಿಸಿದರು. ಸಭೆಯಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.