ನೇಸರ ನ1: ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ದಕ್ಷಿಣಕನ್ನಡ ಜಿಲ್ಲಾಪಂಚಾಯತ್ ಉನ್ನತ ಪ್ರಾಥಮಿಕ ಶಾಲೆ ನೆಲ್ಯಾಡಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಗುರು ಆನಂದ ಅಜಿಲ ವಹಿಸಿದರು, ಕನ್ನಡ ಭಾಷೆಯ ಬಗ್ಗೆ ನಮಗೆ ಇರಬೇಕಾದ ಅಭಿಮಾನ, ಕನ್ನಡ ರಾಜ್ಯೋತ್ಸವ ಅಚರಣೆಯ ಮಹತ್ವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕನ್ನಡದ ವಿವಿಧ ಹಾಡುಗಳ ಗಾಯನ ನಡೆಸಿದರು. ದೈಹಿಕ ಶಿಕ್ಷಕ ಜನಾರ್ಧನ.ಟಿ ಸ್ವಾಗತಿಸಿ, ಪ್ರವೀಣ ಕುಮಾರಿ.ಕೆ ವಂದಿಸಿದರು. ಸಭೆಯಲ್ಲಿ ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.