

ಕೊಕ್ಕಡ: ಎಮ್.ಸಿ.ಎಫ್.ಎಲ್ ಮಂಗಳೂರು ವತಿಯಿಂದ ಒದಗಿಸುವ 2 ಕೊಠಡಿಗಳೂ ಸೇರಿದಂತೆ ನಿಡ್ಲೆ ಸರಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್. ಮೂಲಕ ನಿರ್ಮಾಣವಾಗುವ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ವನ್ನು ಸೆ.26ರಂದು ನೆರವೇರಿಸಲಾಯಿತು.
ವಿ.ಪ.ಸದಸ್ಯ ಪ್ರತಾಪ್ ಸಿಂಹ ನಾಯಕ್ ಶಿಲಾನ್ಯಾಸ ನೆರವೇರಿಸಿ ಶುಭಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಡ್ಲೆ ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯರಾದ ಸತ್ಯನಾರಾಯಣ ರಾವ್ ಪೈರೋಡಿ, ವೇಣೂರು ಕಾಲೇಜಿನ ಉಪ ಪ್ರಾಂಶುಪಾಲ ವೆಂಕಟೇಶ್ ತುಳುಪುಳೆ, ಎಂಸಿಎಫ್ಎಲ್ ನ ಅಸಿಸ್ಟೆಂಟ್ ಮ್ಯಾನೇಜರ್ ರಾಕೇಶ್, ಸೀನಿಯರ್ ಮ್ಯಾನೇಜರ್ ವಿವೇಕ್ ಕೋಟ್ಯಾನ್, ಕಂಟ್ರಾಕ್ಟರ್ ಸದಾಶಿವ ಸುವರ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ಗೌಡ ನೂಜಿಲ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಮುಖ್ಯಶಿಕ್ಷಕಿ ಶಾಂತ ಸ್ವಾಗತಿಸಿದರು. ಹಳೆ ವಿದ್ಯಾರ್ಥಿಗಳ ಸೇವಾ ಟ್ರಸ್ಟ್ ನ ಅಧ್ಯಕ್ಷ ರಾಜಗುರು ಹೆಬ್ಬಾರ್ ಮಾಡಂಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶರತ್ ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ರೂ. 10,000 ದೇಣಿಗೆ ನೀಡಿದ ಯುವ ಸಮೂಹ ಬೂಡುಜಾಲು ಹಾಗೂ ರೂ.25,000ನೀಡಿದ ಕಂಟ್ರಾಕ್ಟರ್ ಸದಾಶಿವ ಸುವರ್ಣ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರು, ಹಳೆ ವಿದ್ಯಾರ್ಥಿಗಳ ಸೇವಾ ಸಂಘದ ಸದಸ್ಯರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.






