

ನೆಲ್ಯಾಡಿ: ಆಲಂಕಾರು ದುರ್ಗಾಂಬ ಲಯನ್ಸ್ ಕ್ಲಬ್ ಮತ್ತು ಕೆ.ವಿ.ಜಿ. ಡೆಂಟಲ್ ಕಾಲೇಜು ಸುಳ್ಯ, ಇವರ ಸಹಯೋಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವು ಬುಧವಾರ ಆಲಂಕಾರು ದುರ್ಗಾಂಬ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.
ಆಲಂಕಾರು ದುರ್ಗಾಂಬ ವಿದ್ಯಾ ಸಂಸ್ಥೆ ಅಧ್ಯಕ್ಷ ಲ.ದಯಾನಂದ ರೈ ಮನವಳಿಕೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಪದ್ಮಪ್ಪ ಗೌಡ ವಹಿಸಿದರು.
ಮುಖ್ಯ ಅತಿಥಿಗಳಾಗಿ ಅಲಂಕಾರು ಗ್ರಾಮ ಪಂ.ಮಾಜಿ ಅಧ್ಯಕ್ಷ ಕೇಶವ ಗೌಡ ಆಲಡ್ಕ, ಅಲಂಕಾರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ಸುಜಾತ ಬಿ., ಡಾ.ಸುಮಂತ್ ಹಾಗೂ ಡಾ.ಜಯಂತ್ ಉಪಸ್ಥಿತರಿದ್ದರು.
ಲ.ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿದರು. ಜನಾರ್ಧನ ಸೂರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು






