ಕೊಕ್ಕಡ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಉತ್ಸವ ಆಚರಣೆ

ಶೇರ್ ಮಾಡಿ

ಕೊಕ್ಕಡ: ವಿಜಯದಶಮಿ ಉತ್ಸವವು ಶ್ರೀರಾಮ ಸೇವಾ ಮಂದಿರದಲ್ಲಿ ಅದ್ಧೂರಿಯಾಗಿ ನಡೆಯಿತು. ಕೊಕ್ಕಡ ಮತ್ತು ಪಟ್ರಮೆ ಗ್ರಾಮಗಳ ಸ್ವಯಂಸೇವಕರು, ಸಜ್ಜನ ಬಂಧುಗಳು ಹಾಗೂ ಮಾತಾ ಭಗಿನಿಯರು ಪಾಲ್ಗೊಳ್ಳುವುದರ ಮೂಲಕ ನಡೆಯಿತು.

ಮಂಡಲದ ಸ್ವಯಂಸೇವಕರು ಸಂಘದ ಗಣವೇಶದಲ್ಲಿ ಆಗಮಿಸಿ ಉಪವಿಷ್ಟ ವ್ಯಾಯಾಮವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೇನಾನಿ ಶ್ರೀಜಿತ್ ಪಡ್ಡಡ್ಕ ವಹಿಸಿದರು.

ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ಪ್ರಾಂಶುಪಾಲ ಪ್ರಜ್ವಲ್ ಕಜೆ ಬೌದ್ಧಿಕ ನೀಡಿದರು. ಕಾರ್ಯಕ್ರಮದಲ್ಲಿ ಮಹೇಶ್ ಪ್ರಾರ್ಥಿಸಿದರು, ತೇಜಸ್ ಸ್ವಾಗತಿಸಿದರು, ಪುರಂದರ ಕಡೀರ ಪರಿಚಯಿಸಿದರು, ವಿಕ್ರಮ್ ಮರುವಂತಿಲ ವೈಯಕ್ತಿಕ ಗೀತೆ ಹಾಡಿದರು , ಶ್ರೇಯಸ್ ಕಡೀರ ಅಮೃತವಚನ ವಾಚಿಸಿದರು, ಮಂಡಲ ಕಾರ್ಯವಾಹ ಸುದರ್ಶನ್ ಹಿತ್ತಿಲು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಅಪ್ರೋಡಿ ವಂದಿಸಿದರು.

  •  

Leave a Reply

error: Content is protected !!