ನಿಷೇಧಿತ ಪಿಎಫ್‌ಐ ಪರ ಪೋಸ್ಟ್‌: ರಾಮಕುಂಜ ಸೈಯ್ಯದ್ ಇಬ್ರಾಹಿಂ ತಂಜಳ್‌ ಬಂಧನ

ಶೇರ್ ಮಾಡಿ

ಮಂಗಳೂರು: ನಿಷೇಧಿತ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಆ ಸಂಘಟನೆಯ ಪರ ಪ್ರಚಾರ ಮಾಡಿದ ಆರೋಪದ ಮೇರೆಗೆ ಕಡಬ ತಾಲ್ಲೂಕು ರಾಮಕುಂಜ ಗ್ರಾಮದ ಬೀಜಾತಳಿ ಹೌಸ್ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಜಳ್‌ (55) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಫ್‌ಐ ಅನ್ನು ಕಾನೂನುಬಾಹಿರ ಸಂಘಟನೆ ಎಂದು 2022ರಲ್ಲಿ ಸರ್ಕಾರ ನಿಷೇಧಿಸಿದೆ. ಆದರೂ, ಆ ಸಂಘಟನೆ ಪರವಾಗಿ ಪ್ರಚಾರ ಮಾಡಿ, ಆತಂಕ ಉಂಟು ಮಾಡಿದ್ದಾನೆ. ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನು ಗುರುವಾರ ಮಂಗಳೂರಿನ ಉರ್ವ ಸ್ಟೋರ್ ಬಳಿ ಬಂಧಿಸಿದ್ದು, ಆತನ ವಶದಲ್ಲಿದ್ದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬೆಂಗಳೂರಿನ 49ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಆರೋಪಿಗೆ ಇದೇ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

  •  

Leave a Reply

error: Content is protected !!