ಮಣ್ಣಗುಂಡಿ: ಲಾರಿ ಪಲ್ಟಿ-ಚಾಲಕ ಪಾರು

ಶೇರ್ ಮಾಡಿ

ನೆಲ್ಯಾಡಿ: ಹಾಸನ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಅ.27ರಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಚಾಲಕ ಉಮೇಶ್ ಎಂಬವರು ತರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಹಾಸನ ಕಡೆಯಿಂದ ಮಂಗಳೂರಿಗೆ ಮರದಹುಡಿ ಸಾಗಾಟದ ಮಾಡುತ್ತಿದ್ದ ಲಾರಿ ಮಣ್ಣಗುಂಡಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯಲ್ಲಿ ಚಾಲಕ ಮಾತ್ರ ಇದ್ದು ಅವರು ತರಚಿದ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

  •  

Leave a Reply

error: Content is protected !!